ಭಟ್ಕಳ- ಆಂಗ್ಲ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಲು ಪಾಲಕರು ಮುಗಿಬೀಳುತ್ತಿರುವುದು ದುರದೃಷ್ಟಕರ. ಮಾತೃಭಾಷೆಯಲ್ಲಿ ಮಗುವಿಗೆ ಶಿಕ್ಷಣ ದೊರೆತರ ಅಂತಹ ಮಗುವಿನ ಸೃಜನಶೀಲತೆ ಇಮ್ಮಡಿಯಾಗಬಲ್ಲದು.ಪಾಲಕರು ಈ ಬಗ್ಗೆ ಯೋಚಿಸಬೇಕಾದ ಅನಿವಾರ್ಯತೆ ಇದೆ ಎಂದು ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ನುಡಿದರು.ಅವರು ರವಿವಾರ ಕ್ಷೇತ್ರ ಸಂಪನ್ಮೂಲ ಕೇಂದ್ರ ಭಟ್ಕಳ ದಲ್ಲಿ ನಡೆದ ಮಕ್ಕಳ ಸಾಹಿತ್ಯ ರಚನಾ ಕಾರ್ಯಾಗಾರದ ಅಧ್ಯಕ್ಷತೆಯಲ್ಲಿ ಮಾತನಾಡಿದರು.
ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಸೈಯದ್ ಜಮಿರುಲ್ಲಾ ಷರೀಪ್ ಮಾತನಾಡಿ ಜನಪದರೇ ನಿಜವಾದ ಸಾಹಿತಿಗಳು. ಸಾಹಿತ್ಯ ಜಗತ್ತು ಸಮೃದ್ಧ ವಾಗಿದೆ. ಈ ಸಾಹಿತ್ಯ ರಥವನ್ನು ಮುಂದೂಡಲು ಮಕ್ಕಳಿಗೆ ಸಾಹಿತ್ಯ ಅಭಿರುಚಿ ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದರು.ವೇದಿಕೆಯಲ್ಲಿ ಮಕ್ಕಳ ಸಾಹಿತ್ಯ ವೇದಿಕೆಯ ಜಿಲ್ಲಾ ಸಂಚಾಲಕ ಸಾಹಿತಿ ಸುಮುಖಾನಂದ ಜಲವಳ್ಳಿ, ಸಾಹಿತಿ ಉಮೇಶ ಮುಂಡಳ್ಳಿ, ತಾಲೂಕು ಸಂಚಾಲಕ ಚಂದ್ರಶೇಖರ ಪಡುವಣಿ, ಲೇಖಕಿ ರೇಷ್ಮಾ ಉಮೇಶ ಇದ್ದರು. ಶಿಕ್ಷಕಿ ಜಯಶ್ರೀ ಆಚಾರ್ಯ ಹಾಗೂ ಪದ್ಮಾವತಿ ನಾಯ್ಕ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದರು. ತೆಂಗಿನಗುಂಡಿ ಪ್ರೌಢಶಾಲಾ ಮಕ್ಕಳು ಪ್ರಾರ್ಥಿಸಿದರು.ಶಿಕ್ಷಕ ಸುರೇಶ ಮುರುಡೇಶ್ವರ ನಿರ್ವಹಿಸಿದರು.