ಕುಮಟಾ: ತಾಲೂಕಾ  ಭಂಡಾರಿ ಸಮಾಜೋನ್ನತಿ  ಸಂಘದ ವಾರ್ಪಿಕ ಸ್ನೇಹ ಸಮ್ಮೇಳನವು ಕುಮಟಾದ ಗಿಬ್ ಹೈಸ್ಕೂಲ್ ನ ರಾಜೇಂದ್ರ ಸಭಾಭವನ ದಲ್ಲಿ ಜರುಗಿತು.ಕಾರ್ಯಕ್ರಮವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಭಾಸ್ಕರ್ ನಾಯಕ್ ದಾವಣಗೆರೆ ಇವರು ಉದ್ಘಾಟಿಸಿದರು .ತಮ್ಮ ಉದ್ಘಾಟನಾ ನುಡಿಯಲ್ಲಿ ಭಂಡಾರಿ ಸಮಾಜವು ಸರ್ವಾಂಗೀಣ ಪ್ರಗತಿ ಹೊಂದಬೇಕಾದರೆ ಎಲ್ಲರೂ ಉತ್ತಮ ಶಿಕ್ಷಣ ಪಡೆಯಬೇಕು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಪಾಲಕರು ಕಲಿಸಬೇಕೆಂದು ಕರೆನೀಡಿದರು.

ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಕಾರವಾರದ ಮೋಹನ ಕಿಂದಳಕರ್ ಶಿರಶಿಯ ನಾಗರಾಜ ನಾಯ್ಕ.ಹೊನ್ನಾವರದ ಶ್ರೀಕಾಂತ ಭಂಡಾರಿ ಉಡುಪಿಯ ಚಪ್ಟೇಗಾರ್ ಸಮಾಜದ ಬಿ ಕೃಷ್ಣ ನಾಯ್ಕ ಇವರುಗಳು ಮಾತನಾಡಿ ಸಮಾಜದ ಸಂಘಟನೆಯ ಬಗ್ಗೆ ಎಲ್ಲರೂ ಗಮನ ಹರಿಸಬೇಕು ಇತರ ಮುಂದುಳಿದ ಸಮಾಜದಂತೆ ಪ್ರಗತಿಯತ್ತ ನಾವೂ ದಾಪುಗಾಲು ಹಾಕಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾದ ಸಮಾಜಸೇವಕ ರಾಜೇಶ ವೆಂಕಟೇಶ ದೇಶಭಂಡಾರಿ ಹೊನ್ನಾವರ ಇವರು ಕಾರ್ಯಕಮಕ್ಕೆ ಶುಭಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಸಂಘದ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ವಿಠ್ಠಲ ಎಂ ಭಂಡಾರಿ ಹೊನ್ನಾವರ ಇವರು ದೇಶಭಂಡಾರಿ ಸಮಾಜವು ಪ್ರಾಮಾಣಿಕತೆಗೆ ಹೆಸರಾದ ಸಮಾಜ ಆಗಿದೆ ಆದರೆ ಶೈಕ್ಷಣಿಕವಾಗಿ ಹೆಚ್ಚಿನ ಪ್ರಗತಿಯನ್ನು ಸಾಧಿಸುವಲ್ಲಿ ಸಫಲತೆಯನ್ನು ಕಂಡುಕೊಳ್ಳಬೇಕಿದೆ.ಪ್ರಸ್ತತ ಎಲ್ಲ ರಂಗದಲ್ಲೂ ಬಾಲಕಿಯರು ಮೇಲುಗೈ ಸಾಧಿಸುತ್ತಿರುವುದು ಅಭಿಮಾನದ ಸಂಗತಿ ಆದರೆ ಹೆಚ್ಚಿನ ಹುಡುಗರು ವಿದ್ಯೆಗೆ ಒತ್ತು ನೀಡದೆ ಅನ್ಯ ಮನಸ್ಕರಾಗಿರುವುದು ಕಳವಳದ ಸಂಗತಿ ಆಗಿದೆ ಹುಡುಗರ ಪಾಲಕರು ಈ ಬಗ್ಗೆ ನಿಗಾವಹಿಸಿ ಮೊಬೈಲ್ ಬದಲು ಪುಸ್ತಕ ಹೆಚ್ಚಿನ ಸಮಯ ಮಕ್ಕಳ ಕೈಯಲ್ಲಿ ಇರಲಿ ಮಕ್ಕಳ ವಿದ್ಯಭ್ಯಾಸದ ಕಡೆ ನಿಗಾವಹಿಸಿ ದೇಶ ಭಂಡಾರಿ ಸಮಾಜದಲ್ಲಿ ಆಯ್ ಎ ಎಸ್. ಆಯ್ ಪಿ ಎಸ್  ಅಧಿಕಾರಿಗಳನ್ನು ನನ್ನ ಜೀವಿತಾವಧಿಯಲ್ಲಿ ಕಾಣುವ ಮಹದಾಸೆ ನನ್ನದು ಈ ನಿಟ್ಟಿನಲ್ಲಿ ಮುಂದುವರಿಯುವ ಮಕ್ಕಳಿಗೆ ತನ್ನ ಸರ್ವವಿಧದ ಸಹಕಾರ ನೀಡಲು ಮುಕ್ತ ಮನಸ್ಸನ್ನು ಹೊಂದಿದ್ದೇನೆ ಎಂದರು.

RELATED ARTICLES  ಸನದಿ ಕಾವ್ಯ ಪ್ರಶಸ್ತಿಗೆ ಗೀತಾ ಸಂದಿಗೋಡಮಠ ಆಯ್ಕೆ


ಪ್ರಾಸ್ತಾವಿಕ ಮಾತುಗಳನ್ನು ಆಡಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಚಿದಾನಂದ ಭಂಡಾರಿಯವರು ದೇಶ ಭಂಡಾರಿ ಸಮಾಜದ ಜನರು ಜನಗಣತಿ ಮುಂತಾದ ದಾಖಲೆಯ ಸಂದರ್ಭದಲ್ಲಿ ಜಾತಿ ಹಾಗೂ ಮಾತೃಭಾಷೆಯನ್ನು ನಮೂದಿಸುವಾಗ ಜಾಗ್ರತೆ ವಹಿಸುವಂತೆ ಕರೆನೀಡಿ ಸಂಘ ನಡೆದು ಬಂದದಾರಿ ಹಾಗೂ ಮುಂದಿರುವ ಗುರಿಯ ಕುರಿತು ಸಭೆಗೆ ವಿವರಿಸಿದರು .ಮುಂಬರುವ ದಿನದಲ್ಲಿ ಜಿಲ್ಲೆಯ ಭಟ್ಕಳ ಯಲ್ಲಾಪುರ ಅಂಕೋಲಾ ,ದಾಂಡೇಲಿಯಲ್ಲಿ ಸಂಘದ ಶಾಖೆಯನ್ನು ಬಲಪಡಿಸುವ ಬಗ್ಗೆ ಹಾಗೂ ದೇಶ ಭಂಡಾರಿ ಸಮಾಜದ ಕೇಂದ್ರ ಸರಕಾರದ ಮಂತ್ರಿಗಳಾದ ಶ್ರೀಪಾದ ನಾಯ್ಕರ ಉಪಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಬೃಹತ್ ಸಮ್ಮೇಳನ ನೆಡೆಸುವ ಕುರಿತಾದ ಆಶಯವನ್ನು ವ್ಯಕ್ತಪಡಿಸಿದರು.

RELATED ARTICLES  ಧಾರೇಶ್ವರ ಸಮೀಪ ರಾಮನಗಿಂಡಿ ಮಾರ್ಗದಲ್ಲಿ ಗುಡ್ಡ ಕುಸಿತ.


ತಾಲೂಕಾ ಸಂಘದ ಅಧ್ಯಕ್ಷ ಶ್ರೀಧರ ಬೀರಕೋಡಿ ಸಭೆಗೆ ಸರ್ವರನ್ನೂ ಸ್ವಾಗತಿಸಿದರು.ಕಾರ್ಯದರ್ಶಿ ಅರುಣ ಮಣಕೀಕರ್ ವಾರ್ಷಿಕ ವರದಿ ವಾಚನ ಮಾಡಿದರು.ಜಯಂತ ಭಂಡಾರಿ ಅವರ ಮಾರ್ಗದರ್ಶನದಲ್ಲಿ ಸಮಾಜದ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಹಿಳಾ ಸಂಘದ ಅಧ್ಯಕ್ಷೆ ಸೂಷ್ಮಾ ಗಾಂವ್ಕರ್ ಕಾರ್ಯದರ್ಶಿ ಸುಲೋಚನಾ ಭಂಡಾರಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ಕುಮಾರಿ ನಿಧಿ ಗಜನ್ ಕರ್ ಹಾಗೂ ಅಭಿಜ್ಞಾ ಕಲಭಾಗ ಇವರನ್ನು ಸನ್ಮಾನಿಸಲಾಯಿತು ಹಾಗೇ  ಉತ್ತಮ ಬಾಣಸಿಗರಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಖಾದ್ಯ ತಯಾರಿಸಿ ಹೆಸರುಗಳಿಸಿದ ಹಳದೀಪುರದ ಬಾಬು ಭಂಡಾರಿ ಅವರನ್ನು ಮತ್ತು ರಸಮಂಜರಿ ಕಾರ್ಯಕ್ರಮದ ಕೀ ಬೋರ್ಡ ವಾದಕರಾಗಿ ಖ್ಯಾತಿಗಳಿಸಿದ ಚಂದ್ರಶೇಖರ ಕೇಶವ ಭಂಡಾರಿ ಇವರುಗಳನ್ನು ಸನ್ಮಾನಿಸಲಾಯಿತು.
ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಮತ್ತು  ಕಾಯಿಲೆ ಪೀಡಿತ ಅಶಕ್ತರಿಗೆ ವೈದ್ಯಕೀಯ ನೆರವಿನ ಧನ ಸಹಾಯವನ್ನೂ ಮಾಡಲಾಯಿತು.


ಕಾರ್ಯಕ್ರಮದ ಆರಂಭದಲ್ಲಿ ಅಂಕಿತಾ ಗಾಂವಕರ್ ಪ್ರಾರ್ಥನ ಗೀತವನ್ನು ಹಾಡಿದರು
ಗೌರೀಶ ಭಂಡಾರಿ ಹಾಗೂ ಯಶಸ್ವಿನಿ ಮಣಕೀಕರ್ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು.ಪ್ರಭಾಕರ ಮಣಕೀಕ್ ರಮೇಶ ಭಂಡಾರಿ ಸುರೇಶ ಗಾಂವ್ಕರ ಮೊದಲಾವರು ಸಹಕರಿಸಿದ್ದರು.