ನಾವು ನಮ್ಮಿಷ್ಟ ಫೇಸ್ಬುಕ್ ಗುಂಪಿನ 6ನೇ ಸ್ನೇಹ ಸಮ್ಮೇಳನ ಸಂಕ್ರಾಂತಿ ಸಂಭ್ರಮ ದಿನಾಂಕ 12 ಜನವರಿ 2020 ಭಾನುವಾರ ಹೊನ್ನಾವರ ಕರ್ಕಿನಾಕಾ ಹವ್ಯಕ ಸಭಾಭವನದಲ್ಲಿ ನಡೆಯಲಿದೆ.


ಸಮಾನ ಮನಸ್ಕ ಹವ್ಯಕರೆಲ್ಲ ಸೇರಿ 2012ರಲ್ಲಿ ರಚಿಸಿಕೊಂಡ ಫನ್ನಿ ಗುಂಪು ಇದು.ಜೀವನದ ಜಂಜಾಟದ ನಡುವೆ ಪ್ರತಿವರ್ಷ ಗುಂಪಿನ ಸದಸ್ಯರೆಲ್ಲರೂ ಒಂದೆಡೆ ಸೇರಿ ಸಂಭ್ರಮಿಸುತ್ತಾರೆ.


ಎಸ್ ಎಸ್ ಎಲ್ ಸಿ ಮತ್ತು ಪಿಯೂಸಿಯಲ್ಲಿ ಶೇಕಡಾ 95ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ,ವಿಶೇಷ ಸಾಧನೆಗೈದ ಸದಸ್ಯರಿಗೆ ಪ್ರತಿಭಾ ಪುರಸ್ಕಾರ ಮತ್ತು ಗೌರವ ಸಮರ್ಪಣೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಶ್ರೀ ಜಿ ಜಿ ಸಭಾಹಿತ,ಶ್ರೀ ವಿಜಯ ಹೆಗಡೆ ದೊಡ್ಮನೆ ಉಪಸ್ಥಿತರಿರುತ್ತಾರೆ.

RELATED ARTICLES  ದಿನಾಂಕ 22/05/2019ರ ದಿನ ಭವಿಷ್ಯ ಇಲ್ಲಿದೆ.
IMG 20200108 WA0001


ಕುಮಾರಿ ಹರ್ಷಿತಾ ಹೆಗಡೆ,ಕುಮಾರಿ ಸ್ನೇಹಶ್ರೀ ಹೆಗಡೆ ಇವರಿಂದ ನಾಟ್ಯ ವೈವಿಧ್ಯ. ಶ್ರೀಮತಿ ರೇಖಾ ಭಟ್ ಕೋಟೆಮನೆ,ಶ್ರೀಮತಿ ಸ್ಮಿತಾ ಹೆಗಡೆ ಕುಂಟೆಮನೆ,ಶ್ರೀಮತಿ ಗೀತಾ ಹೆಗಡೆ,ಶ್ರೀ ಸುರೇಶ್ ಭಟ್ ಬೆಣ್ಣೆ,ಶ್ರೀ ಅಕ್ಷಯ ಹೆಗಡೆ ಅಂಶಳ್ಳಿ ಇವರಿಂದ ಸಂಗೀತ ವೈವಿಧ್ಯ.
ಬಿಗ್ ಬಾಸ್ ಖ್ಯಾತಿಯ ಶ್ರೀ ರವಿ ಮುರೂರು,ಖ್ಯಾತ ಯಕ್ಷಗಾನ ಭಾಗವತ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ,ಪ್ರಸಿದ್ಧ ತಬಲಾ ವಾದಕ ಶ್ರೀ ಗೋಪಾಲಕೃಷ್ಣ ಹೆಗಡೆ ಕಲಭಾಗ,ಮದ್ದಳೆ ವಾದಕ ಶ್ರೀ ನರಸಿಂಹ ಹೆಗಡೆ ಮುರೂರು ಇವರಿಂದ ಗಾನ ವೈಭವ.
ಶ್ರೀ ಆರ್ ಜಿ ಹೆಗಡೆ ಇವರ ಹಾಸ್ಯ ರಸಾಯನ.
ಸದಸ್ಯರಿಗೆ,ಮಕ್ಕಳಿಗೆ ಫನ್ನಿ ಗೇಮ್ಸ್,ಕ್ವಿಜ್,ಫ್ಯಾಶನ್ ಶೋ ಬಹುಮಾನ ವಿತರಣೆ ನಡೆಯಲಿದ್ದು ಪಕ್ಕಾ ಹವ್ಯಕ ಶೈಲಿಯ ಊಟೋಪಚಾರ ಇರುತ್ತಿದ್ದು ಕೇರಳ,ಕರ್ನಾಟಕ,ಗೋವಾ,ಮಹಾರಾಷ್ಟ್ರಗಳಿಂದ ಗುಂಪಿನ ಸದಸ್ಯರು ಆಗಮಿಸಿ ಸಂಭ್ರಮಿಸಲಿದ್ದಾರೆ.

RELATED ARTICLES  ರೆಡಿಯಾಯ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ! ಉತ್ತರ ಕನ್ನಡದ ಕ್ಷೇತ್ರಗಳಿಗೆ ಸ್ಪರ್ಧಿಗಳು ರೆಡಿ?