ದಿನಾಂಕ :03-02-2020 ರಿಂದ 09-02-2020 ರವರೆಗೆ ಕರ್ನಾಟಕ ಒಲಂಪಿಕ್ ಅಸೋಶಿಯೇಶನ್ ಹಾಗೂ ಕರ್ನಾಟಕ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಇವರ ಆಶ್ರಯದಲ್ಲಿ ಮಿನಿ ಒಲಂಪಿಕ್ 14 ವರ್ಷದ ಒಳಗಿನ ಬಾಲಕ-ಬಾಲಕಿಯರ ಖೋಖೊ ಪಂದ್ಯಾವಳಿಯು ಬೆಂಗಳೂರಿನಲ್ಲಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅಮೆಚೋರ್ ಖೋಖೊ ಅಸೋಶಿಯೇಶನ್ ಸಂಸ್ಥೆಯು ಮೇಲೆ ತಿಳಿಸಿದಂತೆ ಪಂದ್ಯಾವಳಿಗೆ ಉತ್ತಮ 8 ತಂಡಗಳು ಕಳಿಸಿಕೊಡಲು ತೀರ್ಮಾನಿಸುತ್ತಿದ್ದು, ಆಯ್ಕೆಗಾಗಿ ಕರ್ನಾಟಕ ಅಮೆಚೋರ್ ಖೋ-ಖೊ ಅಸೋಶಿಯೇಶನ್ ಇವರ ಆಶ್ರಯದಲ್ಲಿ ರಾಜ್ಯ ಬಾಲಕಿಯರ ಖೋಖೊ ಚಾಂಪಿಯನ್ ಶಿಪ್ ಪಂದ್ಯಾವಳಿಯು ಇದೇ ಬರುವ ದಿನಾಂಕ 17-01-2020 ರಿಂದ 19-01-2020 ರವರೆಗೆ ಮೇಲಗಿರಿ, ತಾಲೂಕು: ಮುದ್ದೋಳ, ಜಿಲ್ಲೆ: ಬಾಗಲಕೋಟೆಯಲ್ಲಿ ನಡೆಯಲಿದೆ. ಮೇಲೆ ತಿಳಿಸಿದಂತೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲಾ ತಂಡಗಳ ಆಯ್ಕೆ ಪ್ರಕ್ರಿಯೆ ದಿನಾಂಕ : 13-01-2020ರಂದು ಪಟ್ಟಣ ಹೊನ್ನಾವರದ ಸೆಂಟ್ ಥಾಮಸ್ ಪ್ರೌಢ ಶಾಲೆ ಮೈದಾನದಲ್ಲಿ ನಡೆಯಲಿದೆ. ಆಸಕ್ತ ಕ್ರೀಡಾಪಟುಗಳು ಅಂದು ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ಹಾಜರಿರತಕ್ಕದ್ದು.

RELATED ARTICLES  ಕುಮಟಾಕ್ಕೆ ಆಗಮಿಸಲಿದ್ದಾರೆ ರಾಹುಲ್ ಗಾಂಧಿ!


ಆಯ್ಕೆಯ ಪ್ರಕ್ರಿಯೆಗೆ ಬೇಕಾಗುವ ದಾಖಲೆಗಳು ಕೆಳಗಿನಂತಿದೆ.

  1. ಕ್ರೀಡಾಪಟುಗಳು ದಿನಾಂಕ : 01-03-2006 ರ ನಂತರ ಜನಿಸಿರಬೇಕು.
  2. ಜನನ ಪ್ರಮಾಣ ಪತ್ರ, ಆಧಾರ ಕಾರ್ಡ, ತರಗತಿಯ ವರ್ಗಾವಣೆ ಪ್ರಮಾಣ ಪತ್ರ.
  3. ಪಾಸ್‍ಪೋರ್ಟ ಸೈಜ 3 ಭಾವಚಿತ್ರ.
  4. ಕ್ರೀಡಾಪಟುಗಳು ವಯಸ್ಸು + ಎತ್ತರ + ತೂಕ =215 ಅಂಕದ ಒಳಗಿರಬೇಕು.
RELATED ARTICLES  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಎಲ್ಲಾ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ.

ಹೆಚ್ಚಿನ ಮಾಹಿತಿಗಾಗಿ :

ರಾಘವೇಂದ್ರ ಮೇಸ್ತ – ಮೊ: 7022130723
ಪ್ರಕಾಶ ಆರ್. ಕುಂಜಿ – ಮೊ: 8197892552 ಸುದೀಶ ನಾಯ್ಕ – ಮೊ: 9448530726