ಕಾರವಾರ: ತಲೆ ಸುತ್ತು ಬಂದು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಜ್ಞೆ ತಪ್ಪಿದ ಘಟನೆ ನಗರದ ವಾರ್ತಾ ಭವನದಲ್ಲಿ ನಡೆಯಿತು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಾರ್ತಾ ಭವನದಲ್ಲಿ ‘ವಾರ್ತಾ ಸ್ಪಂದನ’ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ಉದ್ಘಾಟನೆಗೆಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಬಂದಿದ್ದರು‌. ಸಭಾ ಕಾರ್ಯಕ್ರಮ ಆರಂಭಗೊಂಡ ಕೆಲವೇ ನಿಮಿಷದಲ್ಲಿ, ವೇದಿಕೆಯಲ್ಲಿ ಕುಳಿತಿದ್ದ ಜಿಲ್ಲಾಧಿಕಾರಿ ಪ್ರಜ್ಞೆ ತಪ್ಪಿದರು.

RELATED ARTICLES  ಕೊವಿಡ್ ಪರೀಕ್ಷೆ ನಿರಾಕರಿಸಿದರೆ ಕಠಿಣ ಕ್ರಮ : ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ.

ಈ ವೇಳೆ ಮಾಧ್ಯಮದವರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳು ಸ್ಥಳದಲ್ಲಿದ್ದರು. ಎಲ್ಲರೂ ಒಮ್ಮೆ ಆತಂಕಗೊಂಡರು. ತಕ್ಷಣವೇ ಜಿಲ್ಲಾಧಿಕಾರಿಯವರಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರಥಮ ಚಿಕಿತ್ಸೆ ನೀಡಿದರು. ಕೆಲವು ನಿಮಿಷಗಳ ಬಳಿಕ ಅವರು ಚೇತರಿಸಿಕೊಂಡರು. ಕಾರ್ಯಕ್ರಮಕ್ಕೆ ಅಡ್ಡಿಯಾಗಬಾರದು ಎಂದು ಕಾರ್ಯಕ್ರಮ ಉದ್ಘಾಟಿಸಿದ ಅವರು, ನಂತರ ಎಲ್ಲರಲ್ಲಿ ಕ್ಷಮೆ ಕೋರಿ ಆಸ್ಪತ್ರೆಗೆ ತೆರಳಿದರು.

RELATED ARTICLES  ಬಿಜೆಪಿಯ ನಾಯಿಗಳು ಬೊಗಳುತ್ತಿರಲಿ, ನಾನು ಆನೆಯಂತೆ ಮುಂದೆ ಸಾಗುವೆ ಕಾರವಾರದಲ್ಲಿ ಆನಂದ್ ಅಸ್ನೋಟಿಕರ್ ಹೇಳಿಕೆ.