ಕುಮಟಾ: ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ  ಬಡಗಣಿಯಲ್ಲಿ ಸಂಭವಿಸಿದೆ. 

ಹೊನ್ನಾವರ ತಾಲೂಕಿನ ಬಡಗಣಿಯ ನಿವಾಸಿ ನಾರಾಯಣ ಮುಕ್ರಿ ಎಂಬಾತ ಸಾರಾಯಿ ಕುಡಿತದಚಟ ಹೊಂದಿದ್ದು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಹೊನ್ನಾವರ  ತಾಲೂಕಿನ ಹಳದೀಪುರ ಸಮೀಪದ ಬಡಗಣಿ ಬ್ರಿಡ್ಜ್ ಸಮೀಪದ ಕುಡಿದ ನೆಶೆಯಲ್ಲಿ ಮನೆಯ ಹತ್ತಿರದ ತೆಂಗಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಈತನ ಪತ್ನಿ ಮಾಲಿನಿ ನಾರಾಯಣ ಮುಕ್ರಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES  ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು; ಆರ್.ವಿ.ದೇಶಪಾಂಡೆ

ಸ್ಥಳಕ್ಕೆ ಹೊನ್ನಾವರ ಪಿ.ಎಸ್.ಐ ಶಶಿಕುಮಾರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ,ಪ್ರಕರಣ ದಾಖಲಿಕೊಂಡಿದ್ದಾರೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಪಾದಾಚಾರಿಗೆ ಬಡಿದ ಕಾರು : ಗಂಭೀರ ಗಾಯ