ಶಿರಸಿ: ಭೂಮಿಯ ಉಗಮದ ಕುರಿತಾಗಿ ಹಲವಾರು ಸಿದ್ಧಾಂತಗಳು ಪ್ರಚಲಿತದಲ್ಲಿದ್ದರೂ ನಿಖರವಾದ ಮಾಹಿತಿ ಇನ್ನೂ ತಿಳಿಯುತ್ತಿಲ್ಲ. ಮೂಲವನ್ನು ಹುಡುಕುವ ಪ್ರಯತ್ನಗಳು ಮುಂದುವರೆಯುತ್ತಲೇ ಇವೆ ಎಂದು ರಸಾಯನ ಶಾಸ್ತ್ರ ಉಪನ್ಯಾಸಕ ಎಂ.ಆರ್.ನಾಗರಾಜ್ ಹೇಳಿದರು.
ಎಂ.ಎಂ.ಕಾಲೇಜಿನ ಭೂಗೋಳಶಾಸ್ತ್ರ ವಿಭಾಗ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಭೂಮಿಯ ಉಗಮದ ಕುರಿತು ಮಾತನಾಡಿದರು. ಭೂಮಿಯ ಭವಿಷ್ಯ ನಿಗೂಢವಾಗಿದೆ. ಭೂಮಿ ಉಗಮಗೊಂಡಾಗ ಯಾವ ಸ್ಥಿತಿಯಲ್ಲಿತ್ತು ಎಂಬುದನ್ನು ನಿಖರವಾಗಿ ಹೇಳಲಾಗುವುದಿಲ್ಲ. ಅಂದಾಜಿನ ಪ್ರಕಾರ ಅದು ಮೂಲದಲ್ಲಿ ಪ್ಲಾಸ್ಮಾ ಸ್ಥಿತಿಯನ್ನು ಹೊಂದಿತ್ತು ಎಂದು ಹೇಳಲಾಗುತ್ತದೆ. ಈ ಕುರಿತಾಗಿ ಹಲವಾರು ರೀತಿಯ ಪ್ರಯೋಗಗಳು ನಡೆಯುತ್ತಲೇ ಇದೆ. ಆಸಕ್ತರು ಈ ಬಗ್ಗೆ ಸವಾಲನ್ನು ಸ್ವೀಕರಿಸಿ ಸತ್ಯವನ್ನು ಬೇಧಿಸುವ ಪ್ರಯತ್ನವಾಗಬೇಕಾಗಿದೆ ಎಂದು ಅಭಿಪ್ರಾಯ ತಿಳಿಸಿದರು.
ಭೂಗೋಳ ಶಾಸ್ತ್ರ ಮುಖ್ಯಸ್ಥೆ ಡಾ.ಕೋಮಲಾ ಭಟ್ ಉಪಸ್ಥಿತರಿದ್ದರು.

RELATED ARTICLES  ಗೌರಿ ವ್ರತ: ಮಹಿಳೆಯರಿಂದ ಬಾಗಿನ ಅರ್ಪಣೆ