ಕುಮಟಾ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಪ್ರವಾಹ ಪರಿಹಾರ ಪರಿಶೀಲನಾ ಸಭೆಯು ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ರಾಜ್ಯದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮೀನುಗಾರರ ಹಿತಕಾಯಲು ಸದಾ ಬದ್ಧವಾಗಿದೆ. ಪ್ರಸಕ್ತ ಸಾಲಿನಲ್ಲಿ ಉಂಟಾದ ಭೀಕರ ಪ್ರವಾಹದಿಂದ ಅನೇಕ ಮೀನುಗಾರರ ದೋಣಿ ಹಾಗೂ ಬಲೆಗಳು ನಾಶ ಹೊಂದಿದ್ದು, ಬಲೆಗೆ ಹಾಗೂ ಇತರ ಪರಿಕರಗಳಿಗೆ ತಲಾ 12,600 ರೂ. ಮತ್ತು ದೋಣಿಗೆ 24 ಸಾವಿರ ರೂ. ಸೇರಿದಂತೆ ಒಟ್ಟೂ 81 ಮೀನುಗಾರರಿಗೆ 13.59 ಲಕ್ಷ ರೂ.ಗಳ ಪರಿಹಾರದ ಮೊತ್ತವನ್ನು ವಿತರಿಸಲಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

RELATED ARTICLES  ಫಾಲ್ಸ್ ನಲ್ಲಿ ಮುಳುಗಿ ಯುವಕ ಸಾವು

ನೆರೆಯಿಂದ ತಾಲೂಕಿನ ಒಟ್ಟೂ 138 ಮೀನುಗಾರರು ದೋಣಿ ಹಾಗೂ ಸಾಕಷ್ಟು ಪ್ರಮಾಣದ ಬಲೆಗಳನ್ನು ಕಳೆದುಕೊಂಡಿದ್ದರು. ಅವರನ್ನು ಗುರುತಿಸಿ ಹಂತ ಹಂತವಾಗಿ ಪರಿಹಾರದ ಮೊತ್ತವನ್ನು ನೀಡಲಾಗಿದೆ. ಉಳಿದ 57 ಮೀನುಗಾರರಿಗೆ ಶುಕ್ರವಾರ ಪರಿಹಾರದ ಮೊತ್ತವನ್ನು ನೀಡಲಾಗಿದೆ ಎಂದ ಅವರು, ಪ್ರಕೃತಿ ವಿಕೋಪದಿಂದ ಮನೆಗೆ ನೀರು ನುಗ್ಗಿ ಹಾನಿಯಾದ 3369 ಸಂತ್ರಸ್ತರಿಗೆ ತಲಾ 10 ಸಾವಿರ.ರೂ ನಂತೆ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದೆ ಎಂದರು.

RELATED ARTICLES  ಶ್ರೀ ಶ್ರೀ ಭಾಗ್ಯಶ್ರೀ ಮಾತಾಜಿಯವರಿಗೆ ಗೋಕರ್ಣ‌ ಗೌರವ

ಕೆಲ ಮಾಹಿತಿ ಕೊರತೆ ಹಾಗೂ ದಾಖಲೆ ಪತ್ರದಲ್ಲಿ ದೋಷವಿದ್ದ ಕಾರಣ ಕೆಲ ಸಂತ್ರಸ್ತರಿಗೆ ಪರಿಹಾರ ಧನ ತಲುಪಿರಲಿಲ್ಲ. ಕಂದಾಯ ಇಲಾಖೆ 2 ನೆಯ ಬಾರಿಗೆ ಪುನಃ ಸರ್ವೇ ನಡೆಸಿ, 76 ಸಂತ್ರಸ್ತರನ್ನು ಗುರುತಿಸಿದೆ. ಅವರಿಗೂ ಸಹ 10 ಸಾವಿರ ರೂ.ನಂತೆ ಪರಿಹಾರ ವಿತರಿಸಲಾಗಿದೆ. ನೆರೆಯ ಸಂದರ್ಭದಲ್ಲಿ ಜೀವದ ಹಂಗು ತೊರೆದು, ಜನರ ಪ್ರಾಣ ರಕ್ಷಿಸಿದ 57 ದೋಣಿ ಮಾಲಿಕರಿಗೆ ತಲಾ 2.500 ರೂ.ನಂತೆ ಒಟ್ಟೂ 1.4 ಲಕ್ಷ ರೂ. ಬಾಡಿಗೆ ಹಣವನ್ನು ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.