ಕುಮಟಾ: ವಿದ್ಯಾರ್ಥಿ ಬದುಕಿನಲ್ಲಿ ಸದ್ಗುಣಗಳನ್ನು ರೂಢಿಸಿಕೊಂಡರೆ ಅದುವೇ ನಿಜವಾದ ವಿದ್ಯಾಭ್ಯಾಸವಾಗುವುದು ಎಂದು ಚೈತನ್ಯ ರಾಜಾರಾಮ ಕ್ಷೇತ್ರ ಶಿರಳಗಿಯ ಬ್ರಹ್ಮಾನಂದ ಭಾರತಿ ಸ್ವಾಮಿ ನುಡಿದರು. ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನೀತಿ ಕಥೆಗಳ ಮೂಲಕ, ಬದುಕಲ್ಲಿ ಸೋತು ಗೆದ್ದ ಮೇಧಾವಿಗಳ ಬದುಕಿನ ಸಾಧನೆಗಳನ್ನು ವಿವರಿಸುತ್ತಾ ವಿದ್ಯಾರ್ಥಿ ಜೀವನದ ಪರಿಣಾಮಕಾರಿ ಅನುಷ್ಠಾನದ ಕುರಿತು ಮಹತ್ವದ ಪ್ರವಚನ ನೀಡಿದರು.

RELATED ARTICLES  ಅಪ್ಪಟ ಹಿಂದೂವಾದಿಗೆ ಮೋದಿ ಸಂಪುಟದಲ್ಲಿ ಸ್ಥಾನ :ಸಂತಸ ಹಂಚಿಕೊಂಡ ನಾಗರಾಜ ನಾಯಕ ತೊರ್ಕೆ.

ಬಾಹ್ಯಾಡಂಬರಕ್ಕಿಂತ ಅಂತರಂಗ ಶುದ್ಧಿಯಿಂದ ಮನುಕುಲ ಬೆಳಗುತ್ತದೆ ಎಂದು ಅವರು ಮಂಕುತಿಮ್ಮನ ಕಗ್ಗ, ನುಡಿಗಟ್ಟುಗಳ ಮೂಲಕ ವಿದ್ಯಾರ್ಥಿಗಳ ಸ್ಮøತಿಪಟಲದಲ್ಲಿ ಅಚ್ಚಳಿಯದ ಪ್ರಭಾವ ಬೀರುವ ಮಾತುಗಳನ್ನಾಡಿದರು. ಪ್ರಾಋಂಭದಲ್ಲಿ ಅದ್ವೈತ್ ಕಡ್ಲೆ, ಸಾತ್ವಿಕ್ ಭಟ್ಟ ಗೀತಾ ಪಠಣ ಮಾಡಿದರು. ಶಾಲೆಯ ಪರವಾಗಿ ಮುಖ್ಯಾಧ್ಯಾಪಕ ಎನ್.ಆರ್.ಗಜು ಫಲಪುಷ್ಪ ಸಮರ್ಪಿಸಿದರು. ಶಿಕ್ಷಕ ಕಿರಣ ಪ್ರಭು ಸ್ವಾಗತಿಸಿದರು. ಶಿಕ್ಷಕ ವಿಷ್ಣು ಭಟ್ಟ ವಂದಿಸಿದರು.

RELATED ARTICLES  ಕುಮಟಾದಲ್ಲಿ ಸರಣಿ ಕಳ್ಳತನ