ಕುಮಟಾ : ಗೋಮಾತೆಯ ಸೇವೆಯಲ್ಲಿ 55 ವರ್ಷಕ್ಕೂ ಅಧಿಕವಾಗಿ ಹಗಲು-ರಾತ್ರಿಯೆನ್ನದೇ ಯಾವೊಂದು ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಸೇವೆಸಲ್ಲಿಸುತ್ತ ತನ್ನ ಜೀವವನ್ನು ಗಂಧದ ಕೊರಡಿನಂತೆ ಸವೆಸಿದ ಗೋಸೇವಕ ಕೂಜಳ್ಳಿಯ ನಾಗಪ್ಪ ಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತ್ನಿ 5 ಗಂಡುಮಕ್ಕಳು, 4 ಹೆಣ್ಣುಮಕ್ಕಳು ಹಾಗೂ ಅಪರಾ ಬಂಧುಗಳಗವನ್ನು ಅಗಲಿದ್ದಾರೆ.

ಅತೀ ಹಿಂದುಳಿದ ಹಾಲಕ್ಕಿ ಸಮಾಜದವರಾದ ಇವರು ಕುಮಟಾ ತಾಲೂಕಿನ ಕೂಜಳ್ಳಿ ಗ್ರಾಮದ ಒಬ್ಬ ಶ್ರೇಷ್ಠ ನಾಟಿ ವ್ಯೆದ್ಯರಾಗಿದ್ದರು. ತಾಲೂಕಿನಲ್ಲಿಯ ಬಹಳಷ್ಟು ಹಳ್ಳಿಗಳಲ್ಲಿ ಗೋವಿಗೆ ರೋಗ ಬಂದರೆ ಮೊದಲಿಗೆ ನೆನಪಿಗೆ ಬರುವ ಹೆಸರ ಇವರದ್ದು. ರಾತ್ರಿಯಾದರೂ ಸರಿ ಇವರು ಪ್ರತ್ಯಕ್ಷವಾಗಿ ಔಷಧ ನೀಡಿ ತಮ್ಮ ಹೃದಯವ್ಯೆಶಾಲ್ಯವನ್ನು ಮೆರೆದ ಎಷ್ಟೋ ಘಟನೆಗಳು ಈಗಲೂ ಜನಮಾನಸದಲ್ಲಿ ಉಳಿದುಕೊಂಡಿದೆ. ತನ್ನ ಇಪ್ಪತ್ತರ ಹರಯದಲ್ಲಿಯೇ ಗೋವುಗಳಿಗೆ
ಔಷಧ ನೀಡುತ್ತ ಬಂದಿದ್ದ ಇವರು ಕಳೆz À7-8 ವರ್ಷದಿಂದ ಅನಾರೋಗ್ಯದ ಕಾರಣದಿಂದ ತಮ್ಮ ನಿಸ್ಸಾಹಯಕತೆ ಪ್ರಕಟಿಸುತ್ತಿದ್ದರು.

RELATED ARTICLES  ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಅಮೃತ ಮಹೋತ್ಸವ

2005 ರಲ್ಲಿ ಗೋಯಾತ್ರೆಯ ಸಂದರ್ಭದಲ್ಲಿ ಶ್ರೀ ರಾಘವೇಶ್ವರ ಸ್ವಾಮಿಗಳು ಇವರ ಗೋಸೇವೆಯನ್ನು ಗುರುತಿಸಿ ಸನ್ಮಾನಿಸಿದ್ದರು. ಕುಮಟಾ ಲಾಯನ್ಸ ಕ್ಲಬ್ ನವರು ಸನ್ಮಾನಿಸಿ ಗೌರವಿಸಿದ್ದರು. 2010 ರಲ್ಲಿ ಕೂಜಳ್ಳಿ ಸ್ವರಸಂಗಮವು ಇವರನ್ನು ಸನ್ಮಾನಿಸಿ ಇವರಸೇವೆಯನ್ನು ಕೊಂಡಾಡಿದ್ದರು.
ಅಪಾರ ಅನುಭವ ಹೊಂದಿದ ಇವರು ಒಂದುನೂರಕ್ಕೂ ಅಧಿಕ ಔಷಧ ಸಸ್ಯಗಳನ್ನು ಗುರುತಿಸುವ ಜ್ಞಾನ ಹೊಂದಿದ್ದರು. ಈ ವಿದ್ಯೆಯನ್ನು ಹಣದ ಸಲುವಾಗಿ ಉಪಯೋಗಿಸುತ್ತಿರಲಿಲ್ಲ. ಯಾರ ಮನೆಯ ಗೋವಿಗೆ ಔಷಧ ನೀಡಲು ಹೋದರೂ ಹಣ ತೆಗೆದುಕೊಳ್ಳದೇ ಸಲ್ಲಿಸಿದ ಸೇವೆ ಇವರನ್ನು ಎತ್ತರಕ್ಕೇರಿಸಿದೆ.ಥಂಡಿರೋಗ, ಕುಂಟಹಲಗೆ, ಜ್ವರ, ಚವಿರೋಗ, ಮುಳ್ಳು ಜಾರುವದು, ಉಂಡೆಜಾರುವದನ್ನು ಸರಿಪಡಿಸುವದು. ಆಕಳು ಕರುಹಾಕದೇ ಇರುವಾಗ ತೆಗೆಯುವದು. ಆ ನಂತರ ಮಾಂಸ ಬಿಳದಿದ್ದರೆ ಮಾಂಸ ತೆಗೆಯುವದು. ಆಕಳಿಗೆ ಚಂಡು ಬಂದಾಗ ಸರಿಪಡಿಸುವದು. ಹೊಟ್ಟೆಬೇನೆ, ಕರಳುಬೇನೆ, ಗಂಟಲುಬೇನೆ, ಕಾಲುಬಾಯಿರೋಗ ಮತ್ತಿತರ ರೋಗಗಳಿಗೆ ಔಷಧ ನೀಡಿ ಗುಣಪಡಿಸುವ ಚಮತ್ಕಾರಿಕೆ ಇವರಲ್ಲಿತ್ತು. ಕಾಲು ಮುರಿದಾಗ ಕಟ್ಟಿ ಸರಿಪಡಿಸಿ ಔಷಧ ನೀಡುವದು, ಅದಲ್ಲದೇ ನಾಗರ ಹಾವು ಕಚ್ಚಿದ ಗೋವುಗಳಿಗೆ ಔಷಧ ನೀಡಿ ಗುಣಪಡಿಸಿದ ನಿಧರ್ಶನಗಳಿವೆ.

RELATED ARTICLES  ಆ್ಯಂಬುಲೆನ್ಸ್ ನಲ್ಲಿಯೇ ಹೆರಿಗೆ : ಹೊನ್ನಾವರ ಸಮೀಪ ಘಟನೆ.