ಅಂಕೋಲಾ : ಸಂಗಾತಿ ರಂಗಭೂಮಿ (ರಿ), ಅಂಕೋಲ ಇವರು ಅರ್ಪಿಸುವ ಕರ್ನಾಟಕದ ಬಾರ್ಡೋಲಿಯಲ್ಲಿ 4 ನೇ ವರ್ಷದ ಅಂಕೋಲ ಉತ್ಸವ – 2020 ಇದರ ಭವ್ಯ ಉದ್ಘಾಟನೆಯನ್ನು ಕಾರವಾರ ಅಂಕೋಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀಮತಿ ರೂಪಾಲಿ ಎಸ್ ನಾಯ್ಕ ರವರು ನೆರವೇರಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕರು ಅಂಕೋಲ ತಾಲ್ಲೂಕಿನ ಎಲ್ಲಾ ಜಾತಿ, ಧರ್ಮ, ವರ್ಗದವರೂ ಮತ್ತು ಎಲ್ಲಾ ಸಂಘ, ಸಂಘಟನೆಯವರೂ ಸೇರಿ ಈ ಭಾರಿ ಒಗ್ಗಟ್ಟಿನಿಂದ ಒಂದಾಗಿ ಒಂದೇ ಉತ್ಸವವನ್ನು ಮಾಡಿ ಸಂಭ್ರಮದಿಂದ ಆಚರಣೆಯನ್ನು ಮಾಡುತ್ತಿರುವುದು ತುಂಬಾ ಸಂತಸ ತಂದಿದೆ, ಹಾಗಾಗಿ ಸಂಘಟಕರಿಗೆ ಕೃತಜ್ಞತೆಯನ್ನು ಹಾಗೂ ಶುಭಾಶಯ ಗಳನ್ನು ಕೋರುತ್ತೆನೆ ಎಂದರು, ನನ್ನ ಕ್ಷೇತ್ರವಾದ ಅಂಕೋಲವನ್ನು ತುಂಬಾ ಅಭಿವೃದ್ಧಿ ಮಾಡುವ ಕನಸನ್ನು ಹೊತ್ತುಕೊಂಡು ನಾನು ಬಂದಿದ್ದೆನೆ ಈಗಾಗಲೇ ಅಂಕೋಲ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಯನ್ನು ರೂಪಿಸಿಕೊಂಡು ಮಾನ್ಯ ಮುಖ್ಯ ಮಂತ್ರಿಗಳ ಬಳಿ ಇಟ್ಟು ಚರ್ಚೆಯನ್ನು ಮಾಡಿದ್ದೆನೆ ಮತ್ತು ಈ ಕುರಿತು ನಿರಂತರ ಪ್ರಯತ್ನ ಮಾಡುತ್ತಿದ್ದೇನೆ, ನಮ್ಮ ಅಂಕೋಲಾದ ಕೆಲವೊಂದು ಗ್ರಾಮದ ಜನರಿಗೆ ವಾಸಿಸಲೂ ಸ್ವಂತ ಜಾಗವಿಲ್ಲ, ಸ್ವಂತ ಮನೆಯಿಲ್ಲ ಈ ಕುರಿತು ಸರ್ಕಾರದ ಗಮನವನ್ನು ಸೆಳೆದಿದ್ದೆನೆ ಮತ್ತು ನನ್ನ ಅವಧಿಯಲ್ಲಿ ನನ್ನ ಕ್ಷೇತ್ರದ ಕೆಲವು ಜನರಿಗೆ ಇರಲು ಜಾಗ, ಮನೆ ಇಲ್ಲದವರಿಗೆ ಜಾಗ, ಮನೆ ಮಾಡಿಸಿ ಕೊಡುವ ಪ್ರಯತ್ನ ಮಾಡುತ್ತಿದ್ದೆನೆ ಮತ್ತು ಅದು ಕಾರ್ಯರೂಪಕ್ಕೆ ಬರುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದರು.
ಈಗಾಗಲೇ ನನ್ನ ಕ್ಷೇತ್ರದ ಅಭಿವೃದ್ಧಿಗೆ 400 ಕೋಟಿಗಿಂತ ಅಧಿಕ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ತೊಡಗಿಸಿದ್ದೆನೆ ಆದರೆ ನನ್ನ ಪ್ರಕಾರ ಅದು ಅಭಿವೃದ್ಧಿ ಅಲ್ಲಾ, ನನ್ನ ಕ್ಷೇತ್ರದ ಪ್ರತಿಯೊಂದು ಮನೆಯ ಯುವಕ ಯುವತಿಯರಿಗೆ ಉದ್ಯೋಗ ಸಿಗಬೇಕು ಮತ್ತು ಅವರ ತಂದೆ ತಾಯಿ ಕುಟುಂಬದ ಸದಸ್ಯರು ನೆಮ್ಮದಿಯ ಜೀವನವನ್ನು ನಡೆಸಬೇಕು ಆವಾಗ ಅದು ನನ್ನ ಪ್ರಕಾರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ, ಆ ನಿಟ್ಟಿನಲ್ಲಿ ನಾನು ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತಿದ್ದೆನೆ ಎಂದರು, ಕ್ಷೇತ್ರದ ಅಭಿವೃದ್ಧಿಗೆ ಯಾವತ್ತೂ ರಾಜಕೀಯ ಮಾಡಬಾರದೂ ಅದೂ ನಾವೂ ನಮ್ಮ ಕ್ಷೇತ್ರದ ಜನತೆಗೆ ಮಾಡುವ ಅನ್ಯಾಯ ಹಾಗಾಗಿ ನಾವೆಲ್ಲರೂ ಪಕ್ಷ ಭೇದ ಮರೆತು ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಈ ಸಂದರ್ಭದಲ್ಲಿ ವಿನಂತಿಸಿದರು ಮತ್ತು ಏಳು ದಿನಗಳ ಕಾಲ ನಡೆಯುವ ಈ ಅಂಕೋಲ ಉತ್ಸವ ಶಾಂತ ರೀತಿಯಲ್ಲಿ ನಡೆಸಿಕೊಂಡು ಹೋಗುವಂತೆ ಸಾರ್ವಜನಿಕರಲ್ಲಿ ವಿನಂತಿಸಿದರು.