ಕಾರವಾರ: ಮೀನುಗಾರರ ವಿರೋಧದ ನಡುವೆಯೂ ಸಾಗರಮಾಲ ಯೋಜನೆಯಡಿ ಪೊಲೀಸ್ ಬಂದೋಬಸ್ತ್ ನಲ್ಲಿ ಇಲ್ಲಿನ ಬೈತಖೋಲ್ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ನಡೆಸಲು ಮುಂದಾದಾಗ ಪೊಲೀಸ್ ಬ್ಯಾರಿಕೇಡ್ ಗಳನ್ನೂ ಮುರಿದು ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ 100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

RELATED ARTICLES  ಮಗುವಿನ ತಂದೆಯ ಹುಡುಕಿಕೊಡಿ

ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಗೆ ಇಲ್ಲಿನ ಮೀನುಗಾರರು ಆರಂಭದಿಂದಲ್ಲೂ ವಿರೋಧ ಮಾಡುತ್ತಾ ಬಂದಿದ್ದು ಇಂದು ಬೆಳಿಗ್ಗೆ ಪೊಲೀಸ್ ಬಂದೋ ಬಸ್ತ್ ನಲ್ಲಿ ಬಂದರು ಇಲಾಖೆ ಅಧಿಕಾರಿಗಳು ಕಾರವಾರದ ರವೀಂದ್ರನಾಥ ಕಲಡ ತೀರದಲ್ಲಿ ಕಾಮಗಾರಿ ನಡೆಸಲು ಆರಭಿಸಿದ್ದರು ಇದರಿಂದ ಆಕ್ರೋಶಗೊಂಡ ಸ್ಥಳೀಯ ಮೀನುಗಾರರು ಕಾಮಗಾರಿ ತಡೆಯಲು ಪ್ರತಿಭಟನೆಗೆ ಇಳಿದರು.

RELATED ARTICLES  ಮಳೆ ಮುಗಿದರೂ ಮುಗಿದಿಲ್ಲ ಅವಾಂತರ : ರಸ್ತೆ ಸರಿಪಡಿಸಲು ಜಿಲ್ಲಾಡಳಿತ ಹರ ಸಾಹಸ

ಪ್ರತಿಭಟನೆಗೆ ಆಗಮಿಸಿದ ಮೀನುಗಾರರು ಸರಕಾರದ ವಿರುದ್ಧ ಧಿಕ್ಕಾರ ಕೂಗಿದ್ದರು.ಈ ವೇಳೆ ಪೊಲೀಸರ್ ಹಾಗೂ ಮೀನುಗಾರರ ನಡುಗೆ ಕೆಲಕಾಲ ಮಾತಿನ ಚಕಮಕಿ ಸಹ ನಡೆಯಿತು. ಹೀಗಾಗಿ ಪ್ರತಿಭಟನೆಗೆ ನಡೆಸುತ್ತಿದ್ದ ನೂರಾರು ಮೀನುಗಾರರು ಈಗಾಗಲೆ ಪೊಲೀಸರು ವಶಕ್ಕೆ ಪಡೆದುಕೊಂಡು ಬಂಧನದಲ್ಲಿರಿಸಿದ್ದಾರೆ.