ಕುಮಟಾ : ಸುಪ್ರಸಿದ್ಧ ಭಾಗವತ ದಿ. ಮಂಜುನಾಥ ಭಾಗವತ ಕಡತೋಕಾ ಇವರ ಸಂಸ್ಮರಣೆಯಲ್ಲಿ ಯಕ್ಷರಂಗ ಪತ್ರಿಕೆಯ ಸಂಯೋಜನೆಯಲ್ಲಿ  ೨ ದಿನಗಳ ಕಡತೋಕಾ ಕೃತಿ-ಸ್ಮೃತಿ ಯಕ್ಷರಂಗೋತ್ಸವಕ್ಕೆ ಹವ್ಯಕ ಸಭಾಭವನದಲ್ಲಿ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ಯಕ್ಷಗಾನ ಕಲೆಗೆ ಸರಿಸಾಟಿ ಇನ್ಯಾವುದೇ ಕಲೆಯಿಲ್ಲ. ನಮ್ಮ ಜಿಲ್ಲೆ ಜನಮಾಸನದಲ್ಲಿ ಯಕ್ಷಗಾನವೆಂಬ ಶ್ರೇಷ್ಠ ಸಂಸ್ಕಾರ ಹಾಸುಹೊಕ್ಕಾಗಿದೆ. ಅದಕ್ಕಾಗಿ ನಮಗೆ ಹೆಮ್ಮೆ ಇದೆ. ಯಕ್ಷಗಾನ ಸಾಂಕೇತಿಕವಾಗದೇ ಸಾಮೂಹಿಕವಾಗಿ ಬೆಳೆಯಬೇಕು ಎಂದರು. ಯಕ್ಷಗಾನ ಸಂಶೋಧಕ ಬೆಂಗಳೂರಿನ ಡಾ. ಆನಂದರಾಮ ಉಪಾಧ್ಯ, ಪತ್ರಕರ್ತ ಅಶೋಕ ಹಾಸ್ಯಗಾರ  ಸಂಸ್ಮರಣಾ ನುಡಿಗಳನ್ನಾಡಿ, ದಿ. ಮಂಜುನಾಥ ಭಾಗವತರ ಯಕ್ಷಗಾನದ ಬಹುಮುಖಿ ಪ್ರತಿಭೆ ಹಾಗೂ ಸಾಧನೆಗಳ ಸೂಕ್ಷ್ಮದರ್ಶನ ಮಾಡಿಸಿದರು. ಎಪಿಎಂಸಿ ಅಧ್ಯಕ್ಷ ರಾಮನಾಥ ಶಾನಭಾಗ ಅಧ್ಯಕ್ಷತೆ ವಹಿಸಿ ಯಕ್ಷಗಾನ ಕಲೆಗಾಗಿ ಯಾವುದೇ ಸಂದರ್ಭದಲ್ಲಿ ಯಕ್ಷಗಾನಕ್ಕಾಗಿ ಎಲ್ಲ ಬಗೆಯ ಸಮರ್ಪಣೆಗೆ ಸಿದ್ಧರಿರಬೇಕು ಎಂದು ಕರೆ ನೀಡಿದರು. ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ಕೊಂಕಣ ರೈಲ್ವೆ ಇಂಜಿನಿಯರ್ ರಘುನಾಥ ನಾಯಕ, ಜಿ.ಎನ್.ಹೆಗಡೆ ಮುರೇಗಾರ್ ಉಪಸ್ಥಿತರಿದ್ದರು. 

RELATED ARTICLES  350 ಫಲಾನುಭವಿಗಳಿಗೆ ಭಾಗ್ಯ ಲಕ್ಷ್ಮೀ ಬಾಂಡ್ ವಿತರಿಸಿದ ಶಾಸಕ ಸುನೀಲ್ ನಾಯ್ಕ.

ದಿ. ಮಂಜುನಾಥ ಭಾಗ್ವತ ಕೃತಿ ಸ್ಮೃತಿ ಸನ್ಮಾನವನ್ನು ಗೋವಿಂದ ನಾಯ್ಕ ಕೋನಳ್ಳಿ, ನಾರಾಯಣ ಭಟ್ ಮೇಲಿನಗಂಟಿಗೆ, ಸುಬ್ರಹ್ಮಣ್ಯ ಭಟ್ ಕಿತ್ರೆ ಇವರಿಗೆ ಪ್ರದಾನ ಮಾಡಲಾಯಿತು. ಬಳಿಕ ಜಾಂಬವತಿ ಪರಿಣಯ ತಾಳಮದ್ದಲೆ ನಡೆಯಿತು. ಯಕ್ಷರಂಗ ಪತ್ರಿಕೆಯ ಸಂಪಾದಕ ಕಡತೋಕಾ ಗೋಪಾಲಕೃಷ್ಣ ಭಾಗವತ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

RELATED ARTICLES  ಶಾಸಕ ಶಿವರಾಮ ಹೆಬ್ಬಾರ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ!