ಶಿರಸಿ : ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ, ಹೈಟೆಕ್ ಡೈಗ್ನೋಸ್ಟಿಕ್ ಕುಮಟಾ ಇವರ ಸಹಯೋಗದಲ್ಲಿ ದಿ:13.01.2020 ರಂದು ಸಂಘದ ಟಿ.ಎಸ್.ಎಸ್. ರೈತರ ಆರೋಗ್ಯ ಕೇಂದ್ರದಲ್ಲಿ ಸುಸಜ್ಜಿತ ರಕ್ತ ತಪಾಸಣಾ ಕೇಂದ್ರವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರು ಕಾರ್ಯಾರಂಭಗೊಳಿಸಿದರು.

RELATED ARTICLES  ವಿದ್ಯುತ್ ತಂತಿ ಸ್ಪರ್ಷಿಸಿ ವ್ಯಕ್ತಿ ಸಾವು ಕೆಲಕಾಲ‌ ಉದ್ವಿಗ್ನ ವಾತಾವರಣ

ಮುಖ್ಯ ಅತಿಥಿಗಳಾಗಿ ಡಾ. ಪಿ. ಎಸ್. ಹೆಗಡೆ, ಡಾ. ನಮೃತಾ ಶಾನಭಾಗ, ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು, ಹಾಗೂ ಸದಸ್ಯರುಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಟಿ.ಎಸ್.ಎಸ್. ಸಮರ್ಪಣ ಪಶು ಚಿಕಿತ್ಸಾಲಯದಲ್ಲಿ ಪೆಟ್ ಶಾಪ್‍ನ್ನು ಸಹ ಸಂಘದ ಅಧ್ಯಕ್ಷರು ಉದ್ಘಾಟಿಸಿದರು.

RELATED ARTICLES  ಬೋಟ್ ನಿಂದ ಸಮುದ್ರಕ್ಕೆ ಬಿದ್ದು ವ್ಯಕ್ತಿ ಸಾವು : ಉದಯ ನಾರಾಯಣ ನಾಯ್ಕ ಇನ್ನಿಲ್ಲ.

ಇಲ್ಲಿ ಜಾನುವಾರುಗಳಿಗೆ ಹಾಗೂ ಪ್ರಾಣಿಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಔಷಧಗಳು ರಿಯಾಯಿತಿ ದರದಲ್ಲಿ ಲಭಿಸುವಂತೆ ಮಾಡಲಾಗಿದೆ. ಈ ಎಲ್ಲಾ ಸೌಲಭ್ಯವನ್ನು ಸಂಘದ ಸದಸ್ಯರ ಅನುಕೂಲಕ್ಕಾಗಿ ಪ್ರಾರಂಭಿಸಿರುವುದರಿಂದ ಹೆಚ್ಚಿನ ಸದಸ್ಯರು ಇದರ ಪ್ರಯೋಜನ ಪಡೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.