ಶಿರಸಿ : ಟಿ.ಎಸ್.ಎಸ್. ಗ್ರೀನ್ ಗೋಲ್ಡ್ ಗೊಬ್ಬರ ಖರೀದಿಸಿದ ಗ್ರಾಹಕರಿಗೆ ಪ್ರತಿ 2 ಚೀಲಕ್ಕೊಂದು ಕೂಪನ್‍ಗಳನ್ನು ನೀಡಲಾಗಿತ್ತು. ಸದರಿ ಕೂಪನ್‍ಗಳನ್ನು ಗ್ರಾಹಕರಿಂದ ಸಂಗ್ರಹಿಸಿ ಲಕ್ಕಿ ಡ್ರಾ ಮಾಡುವ ಮೂಲಕ 165 ಕ್ಕೂ ಹೆಚ್ಚಿನ ವಿಜೆತರುಗಳನ್ನು ಆಯ್ಕೆ ಮಾಡಲಾಯಿತು.

ಮೊದಲನೇ ಬಹುಮಾನವಾದ ಹೊಂಡಾ ಆಕ್ಟಿವಾ ಐ ಬೈಕ್ ವಿಜೇತರಾಗಿ ಜ್ಯೋತಿ ಹೆಗಡೆ ಸಾಗರ, ಎರಡನೇ ಬಹುಮಾನವಾದ 32 ಎಲ್.ಇ.ಡಿ. ಟಿವಿ ವಿಜೇತರಾಗಿ ದಯಾನಂದ ಹೆಗಡೆ ಯಲ್ಲಾಪುರ, ಮೂರನೇ ಬಹುಮಾನ ವೀಡ್ ಕಟರ್ ವಿಜೇತರಾಗಿ ರಘು ಶಾಡಗುಪ್ಪ ನಾಲ್ಕನೇ ಬಹುಮಾನವಾದ ಮೊಬೈಲ್ ವಿಜೇತರಾಗಿ ಕಮಲಾಕರ ಗ. ಹೆಗಡೆ ಕಾನಳ್ಳಿ, ಐದನೇ ಬಹುಮಾನವಾದ ಹೈ ಪ್ರೆಶರ್ ವಾಶರ್ ವಿಜೇತರಾಗಿ ಜ್ಯೋತಿ ಹೆಗಡೆ ಸಾಗರ ಇವರುಗಳು ಆಯ್ಕೆಯಾಗಿರುತ್ತಾರೆ.

RELATED ARTICLES  ಮೂರೂರು ಕೋಣಾರೆಯ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಕಳ್ಳತನ : ಬೀಗ ಮುರಿದು ಕಳ್ಳತನ ಮಾಡಿದ ಖಧೀಮರು

ಇನ್ನುಳಿದ 160ಕ್ಕೂ ಹೆಚ್ಚಿನ ವಿಜೇತರುಗಳು ಆಯ್ಕೆಯಾಗಿರುತ್ತಿದ್ದು, ಸದರಿ ಬಹುಮಾನ ವಿಜೇತರಿಗೆ ಬಹುಮಾನವನ್ನು ಸಂಘದ ಪ್ರಧಾನ ಕಛೇರಿಯ ಕೃಷಿ ವಿಭಾಗದಲ್ಲಿ ಹಾಗೂ ಶಾಖೆಗಳಲ್ಲಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ವೇಶ್ಯಾವಟಿಕೆ ನಡೆಸುತ್ತಿದ್ದ ಲಾಡ್ಜ ಮೇಲೆ ಪೊಲೀಸ್ ರೈಡ್..!