ಅಂಕೋಲಾ : ವಿವೇಕಾನಂದರು ಕೇವಲ ಭಾರತಕ್ಕೆ ಅಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಮಾನ್ಯರು. ಅವರ ತತ್ವಾದರ್ಶಗಳು ನಮ್ಮ ಯುವಕರಿಗೆ ಆಶಾಕಿರಣಗಳಾಗಿವೆ. ವಿವೇಕಾನಂದರ ತತ್ವಗಳ ಸಾರವೆಂದರೆ “ಇತರರಿಗೆ ಒಳ್ಳೇಯದನ್ನು ಮಾಡುವುದೇ ನಿಜವಾದ ಮಾನವ ಧರ್ಮ. ಇರುವುದೆಲ್ಲವನ್ನು ಹಂಚಿಕೊಂಡು ಬಾಳುವುದೆ ಭಾರತೀಯ ಸಂಸ್ಕøತಿ. ನಾವು ತೆಗೆದುಕೊಳ್ಳುವುದಕ್ಕಿಂತ ಇತರರಿಗೆ ಕೊಡುವುದರಲ್ಲಿ ಹೆಚ್ಚು ಸಂತೋಷವಿದೆ” ಎಂದು ಲೇಖಕ ಲಾ. ಮಹಾಂತೇಶ ರೇವಡಿ ಹೇಳಿದರು. ಅವರು ಅಂಕೋಲೆಯ ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯ ಹಾಗೂ ಅಂಕೋಲಾ ಲಯನ್ಸ ಕ್ಲಬ್ ಕರಾವಳಿ ವಿವೇಕಾನಂದರ 157ನೇ ಜನ್ಮದಿನಾಚರಣೆ ಪ್ರಯುಕ್ತ ಏರ್ಪಡಿಸಿದ ಭಾಷಣ ಹಾಗೂ ರಸಪ್ರಶ್ನೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ವಿನಾಯಕ ಹೆಗಡೆ “ಸ್ವಾಮಿ ವಿವೇಕಾನಂದರು ತಮ್ಮ ವ್ಯಕ್ತಿತ್ಚ ಹಾಗೂ ಕಾರ್ಯದಿಂದ ಪ್ರಸಿದ್ಧಿ ಪಡೆದ ಹಾಗೆ ನಮ್ಮ ಯುವಜನರು ಕರ್ತವ್ಯದಲ್ಲಿ ನಂಬಿಕೆ, ಆತ್ಮವಿಶ್ವಾಸ ಹಾಗೂ ಒಳ್ಳೇಯ ವ್ಯಕ್ತಿತ್ವದಿಂದ ರಾಷ್ಟ್ರಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕು ಹಾಗೂ ವಿವೇಕಾನಂದರ ಆದರ್ಶಗಳು ಯುವಶಕ್ತಿಗೆ ಸದಾ ಪ್ರೇರಣಾದಾಯಕವಾಗಿದೆಯೆಂದರು”.
ಕೆ.ಎಲ್.ಇ ಸಭಾಂಗಣದಲ್ಲಿ ಜರುಗಿದ ವಿವೇಕಾನಂದರ ಜೀವನ ಆದರ್ಶಗಳ ಕುರಿತು ಭಾಷಣ ಸ್ಪರ್ಧೆಯಲ್ಲಿ 18ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವೇಕಾನಂದರ ಕುರಿತು ರಸಪ್ರಶ್ನೆ ಕಾರ್ಯಕ್ರಮವನ್ನು ಲಾ. ಎಸ್.ಆರ್.ಉಡುಪಿಯವರು ನಡೆಸಿಕೊಟ್ಟರು. ಪ್ರೋ. ಮಂಜುನಾಥ ಇಟಗಿ, ಪ್ರೋ. ಅಮರಿನಾ ಶೇಖ, ಲಾ. ಎಸ್.ಆರ್. ಉಡುಪಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಮೇಧಾ ಹಾಗೂ ಸಂಗಡಿಗರ ಪ್ರಾರ್ಥನೆಯಿಂದ ಪ್ರಾರಂಭವಾದ ಸಭಾ ಕಾರ್ಯಕ್ರಮದಲ್ಲಿ ಅರ್ಪಿತಾ ನಾಯಕ ಸ್ವಾಗತಿಸಿದರು. ಕು.ವಿನಯಾ ನಾಯಕ ಕಾರ್ಯಕ್ರಮ ನಿರೂಪಿಸಿದರೆ ಉಪನ್ಯಾಸಕಿ ಪ್ರೇಮಾ ನಾಯಕ ವಂದಿಸಿದರು. ಅಂಕೋಲಾ ಲಯನ್ಸ ಕ್ಲಬ್ ಕರಾವಳಿ ಬಹುಮಾನಗಳನ್ನು ಪ್ರಾಯೋಜಿಸಿತ್ತು. ಪ್ರಥಮ ಬಹುಮಾನ ಕು.ತಿಲಕ ನಾಯಕ ಪಡೆದರೆ ದ್ವಿತೀಯ ಬಹುಮಾನವನ್ನು ಕಾಂಚನಾ ಗುನಗಾ, ಬಿ.ವಿ. ಕಾವ್ಯಾ ಹಂಚಿಕೊಂಡರು. ತೃತೀಯ ಬಹುಮಾನ ಪೂರ್ವಿ ಹಳಗೇಕರ ಪಡೆದರು. ಈ ಕಾರ್ಯಕ್ರಮದಲ್ಲಿ ಲಾಯನ್ಸ ಸದಸ್ಯರಾದ ಸಂಜಯ ಅರುಂಧೇಕರ, ಗಣಪತಿ ನಾಯಕ, ಖಜಾಂಜಿ ಸಂತೋಷ ಸಾಮಂತ, ಕೆ.ಎಲ್.ಇ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.