ಕುಮಟಾ: ತಾಲೂಕಿನ ಸರಕಾರಿ ಅಸ್ಪತ್ರೆ ಹಾಗೂ ಸರಕಾರಿ ಆಯುರ್ವೇದ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ ಗತಿಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಆಯುರ್ವೇದ ಆಸ್ಪತ್ರೆ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತಿದೆ. ಪ್ರತಿನಿತ್ಯ 60 ರಿಂದ 80 ರೋಗಿಗಳು ಸರಕಾರಿ ಆಯುರ್ವೇದ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚಿಕಿತ್ಸೆ ಪಡೆದುಕೊಳ್ಳಲು ಬಂದಂತಹ ರೋಗಿಗಳನ್ನು ವಿಚಾರಿಸಿದಾಗ ಆಯುರ್ವೇದ ಆಸ್ಪತ್ರೆಯ. ವೈದ್ಯರು ಯಾವುದ ರೀತಿಯ ಹಣ ತೆಗೆದುಕೊಳ್ಳದೆ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದರು. ಕುಮಟಾ ತಾಲೂಕಿನಿಂದ ಅಲ್ಲದೆ ಶಿರಸಿ ಮುಂತಾದ ಪ್ರದೇಶಗಳಿಂದಲೂ ಬಂದು ಸರಕಾರಿ ಆಯುರ್ವೇದ ಆಸ್ಪತ್ರೆಗೆ ರೋಗಿಗಳು ಆಗಮಿಸುತ್ತಿದ್ದಾರೆ, ಕುಮಟಾ ಸರಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತಾ ಕೆಲಸಕ್ಕೆ ಪ್ರತ್ಯಕ ಕಾರ್ಮಿಕರಿದ್ದಾರೆ, ಆದರೆ ಈ ಒಂದು ಆಯುರ್ವೇದ ಆಸ್ಪತ್ರೆಗೆ ಸ್ವಚ್ಛತಾ ಸಿಬ್ಬಂದಿಗಳಿಲ್ಲ. ಸರಕಾರ ಹೆಚ್ಚಿನ ಮುತುವರ್ಜಿ ವಹಿಸಿ ಈ ಆಸ್ಪತ್ರೆಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಓದಗಿಸಿ ಕೊಡಬೇಕಿದೆ. ಅದು ಯಾವುದೆ ರೀತಿಯ ಸಮಸ್ಯೆಯನ್ನು ನನ್ನ ಗಮನಕ್ಕೆ ತಂದಲ್ಲಿ, ಸಮಸ್ಯೆ, ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತನೆ ಎಂದು ಭರವಸೆಯನ್ನು ನೀಡಿದರು.

RELATED ARTICLES  ಉತ್ತರ ಕನ್ನಡದಲ್ಲಿ ಅನಂತ ಕುಮಾರ್ ಹೆಗಡೆ ಎದುರು ಆನಂದ ಅಸ್ನೋಟಿಕರ್?

ಈ ಸಂದರ್ಭದಲ್ಲಿ ಕುಮಟಾ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ:ಗಣೇಶ ನಾಯ್ಕ, ಪಿಜಿಷನ್ ಗಳಾದ ಡಾ: ಶ್ರೀನಿವಾಸ ನಾಯಕ ಆಯುರ್ವೇದ ಆಸ್ಪತ್ರೆಯ ವೈದ್ಯಾದಿಕಾರಿಗಳಾದ ಡಾ. ಪಿ.ಬಿ ಭಾರತಿ, ಹಾಗೂ ಪುರಸಭಾ ಸದಸ್ಯರಾದ ಸಂತೋಷ ನಾಯ್ಕ ಮುಂತಾದವರು ಹಾಜರಿದ್ದರು.

RELATED ARTICLES  ಭಟ್ಕಳ : ಶೌಚಕ್ಕಾಗಿ ಸಮುದ್ರ ತೀರಕ್ಕೆ ತೆರಳಿದ ವ್ಯಕ್ತಿ ಸಮುದ್ರದಲ್ಲಿ ಬಿದ್ದು ಸಾವು