ಕಾರವಾರ : ತಾಲೂಕಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದು ಇದೀಗ ಅದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಂದೂ ಕೂಡಾ ಮೀನುಗಾರರು ಪ್ರತಿಭಟನೆ ನಡೆಸಿದರು. 16 ಕ್ಕೆ ಕಾರವಾರ ಬಂದ್ ಮಾಡೋದಾಗಿ ಪ್ರತಿಭಟನಾ ಕಾರರು ಎಚ್ಚರಿಸಿದ್ದಾರೆ.

ವಾಣಿಜ್ಯ ಬಂದರು ಕಾಮಗಾರಿ ವಿರೋಧಿಸಿ ಮೀನುಗಾರರು ನಡೆಸುತ್ತಿರುವ ಪ್ರತಿಭಟನೆಯ ವೇಳೆ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ವಿರುದ್ದ ಪ್ರತಿಭಟನಾಕಾರರು ಅವಾಚ್ಯ ಶಬ್ದಗಳಿಂದ ಬೈದು ಅವರ ಬಾವ ಚಿತ್ರಕ್ಕೆ ಅವಹೇಳನ ಮಾಡಿದ್ದರು ಎನ್ನಲಾಗಿದ್ದು . ಮನೆಗೆ ಮುತ್ತಿಗೆ ಹಾಕೋದಾಗಿ ಪ್ರತಿಭಟನಾಕಾರರು ಹೇಳಿದ್ದರು ಎನ್ನಲಾಗಿದೆ.

RELATED ARTICLES  ಅಂಬ್ಯುಲೆನ್ಸ್ ನಲ್ಲಿಯೇ ಅವಳಿ ಮಕ್ಕಳ ಜನನ..!

ಕೆಲ ದಿನಗಳ ಹಿಂದೆ ಯಾರೋ ಕಿಡಿಗೇಡಿಗಳು ಶಾಸಕಿ ರೂಪಾಲಿ ನಾಯ್ಕ ಮನೆಗೆ ಕಲ್ಲಿ ಎಸೆದು ಹೋದಿದ್ದರು ಎನ್ನಲಾಗಿದ್ದು ಈ ಹಿನ್ನಲೆಯಲ್ಲಿ ಕಾರವಾರ ನಗರದಲ್ಲಿರುವ ಶಾಸಕಿ ರೂಪಾಲಿ ನಾಯ್ಕ ಮನೆಗೆ ಭಾರೀ ಭದ್ರತೆ ನೀಡಲಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿದೆ.

RELATED ARTICLES  ಕುಮಟಾದಲ್ಲಿ ಕೊರೊನಾ‌? ಜನತೆ ತುರ್ತಾಗಿ ಆತಂಕಗೊಳ್ಳುವ ಅಗತ್ಯ ಇಲ್ಲ : ಇರಲಿ ಸೂಕ್ತ ಮುನ್ನೆಚ್ಚರಿಕೆ