ಭಟ್ಕಳ- ರಾಷ್ಟೀಯ ಸತ್ಯಾಗ್ರಹ ಸ್ಮಾರಕ ಶಿಕ್ಷಣ ಸಮಿತಿ ಶೆಟಗೇರಿ ಅಂಕೋಲಾ ಇವರ ಪ್ರಾಯೋಜಕತ್ವದಲ್ಲಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ಶೆಟಗೇರಿಯಲ್ಲಿ ನಡೆದ ೫೮ ವರ್ಷದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತಾಲೂಕಿನ ಶ್ರೀವಲ್ಲಿ ಪ್ರೌಢಶಾಲೆಯ ಕುಮಾರಿ ಯಶೋದ ನಾಯ್ಕ ೫೦೦೦ರೂ ನಗದಿನೊಂದಿಗೆ ಪ್ರಥಮ ಸ್ಥಾನ ಹಾಗೂ ದೀಪ ಆಚಾರಿ ೩೦೦೦ ರೂ ನಗದಿನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡು ಸಮಗ್ರ ವೀರಾಗ್ರಣಿ ಪಾರಿತೋಷಕದೊಂದಿಗೆ ಶಾಲೆಗೆ ಕೀರ್ತಿ ತಂದಿರುತ್ತಾರೆ. ಶ್ರೀವಲ್ಲಿ ಶಿಕ್ಷಕಿ ರೇಷ್ಮಾ ನಾಯಕ ಪ್ರಬಂಧ ಸಿದ್ದಪಡಿಸುವ ಮೂಲಕ ಈ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದು, ಶೈಕ್ಷಣಿಕ ಹಿತದೃಷ್ಟಿಯಿಂದ ೭ ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಕಡ್ಡಾಯಗೊಳಿಸಲೇ ಬೇಕು ಎಂಬ ಕುರಿತು ಈ ವಿದ್ಯಾರ್ಥಿಗಳು ಪರ ಹಾಗೂ ವಿರೋದ ಎರಡೂ ರೀತಿಯಲ್ಲಿ ಮಾತನಾಡಿ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಜಿಲ್ಲೆಯಿಂದ ಸುಮಾರು ೧೫ ಕ್ಕೂ ಹೆಚ್ಚು ಪ್ರೌಢಶಾಲಾಗಳಿಂದ ಆಗಮಿಸಿದ ವಿದ್ಯಾರ್ಥಿಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಶಾಂತಾರಾಮ ನಾಯಕ ಅವರು ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪಾರಿತೋಷಕ ನೀಡಿ ಶುಭ ಹಾರೈಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯಾಧ್ಯಾಪಕಿ ಮಮತಾ ಭಟ್ಕಳ ,ಶಾಲಾ ಶಿಕ್ಷಕರು ಸಿಬ್ಬಂದಿ ವರ್ಗ ಆಡಳಿತ ಮಂಡಳಿ ಹಾಗೂ ಊರ ನಾಗರಿಕರು ಶುಭಕೋರಿದ್ದಾರೆ.