ಕಾರವಾರ: ಫೆ. 5,6,7 ರಂದು ಕಲಬುರ್ಗಿಯಲ್ಲಿ ನಡೆಯಲಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು ಪ್ರತಿನಿಧಿ ಶುಲ್ಕ 250 ರೂ. ಸಂದಾಯ ಮಾಡಿ ತಮ್ಮ ಹೆಸರನ್ನು ತಕ್ಷಣ ಹೆಸರು ನೋಂದಾಯಿಸಿಕೊಳ್ಳಲು ಉತ್ತರ ಕನ್ನಡ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

RELATED ARTICLES  ಮಕ್ಕಳ ಆರೋಗ್ಯಕ್ಕೆ ಮನೆ ಮದ್ದು

ಸಮ್ಮೇಳನಕ್ಕೆ ಬಂದಾಗ ಪ್ರತಿನಿಧಿ ಶುಲ್ಕ ಪಾವತಿಸಿದ  ಬಾರ್ ಕೋಡ್ ಅಂಟಿಸಿದ ರಸೀದಿ ಇದ್ದವರಿಗೆ ಮಾತ್ರ ಊಟ ವಸತಿ ವ್ಯವಸ್ಥೆ ಮಾಡಲಾಗುವುದು. ಕಲಬುರ್ಗಿಯ ಆಸಪಾಸಿನಲ್ಲಿರುವ ಶಾಲಾ ಕಾಲೇಜು ಅಥವಾ  ವಿದ್ಯಾರ್ಥಿ ನಿಲಯಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗುವುದು. ಶುಲ್ಕ ಸಂದಾಯ ಮಾಡಿದ ಮೇಲೆಯೇ ಪ್ರತಿನಿಧಿಯೆಂದು ನೋಂದಣಿ ಮಾಡಿಕೊಳ್ಳಲಾಗುವುದು.

RELATED ARTICLES  ನಾಳೆ ಕುಮಟಾದಿಂದ ಅನಂತಮೂರ್ತಿ ಹೆಗಡೆ ಪಾದಯಾತ್ರೆ : ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕ್ಕೆ ಆಗ್ರಹಿಸಿ ನಡಿಗೆ ಮುಂದುವರಿಸಲಿರುವ ಅನಂತಮೂರ್ತಿ ಹೆಗಡೆ

ಸಮ್ಮೇಳನಕ್ಕೆ ಬರುವವರು ಅಗತ್ಯಕ್ಕೆ ತಕ್ಕಷ್ಟು ಹಾಸಿಗೆ ಹೊದಿಕೆಗಳನ್ನು ಅವರವರೇ ತಂದುಕೊಳ್ಳಬೇಕು.  ಪ್ರತಿನಿಧಿಯಾಗಲು ಅರವಿಂದ ಕರ್ಕಿಕೋಡಿ ಅಧ್ಯಕ್ಷರು, ಜಿಲ್ಲಾ ಕ.ಸಾ.ಪ. (ಮೊಬೈಲ್ ಸಂಖ್ಯೆ 9448438472) ಅವರನ್ನು ಸಂಪರ್ಕಿಸಿ ಹೆಚ್ಚಿನ ವಿವರ ಪಡೆಯಬಹುದು.