ಹೊನ್ನಾವರ : ತಾಲೂಕಿನ ಟೊಂಕದಲ್ಲಿ ನಡೆಯುವ ಟೊಂಕಉತ್ಸವದ ಪ್ರಥಮ ದಿನದ ಸಭಾ ಕಾರ್ಯಕ್ರಮವನ್ನು ಶ್ರೀ ನೀಲಕಂಠ ಮೇಸ್ತ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ್ ಹೊನ್ನಾವರ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಶ್ರೀ ಜೈನ ಜಟಕೇಶ್ವರ ಯುವಕ ಸಮಿತಿಯ ಅಧ್ಯಕ್ಷರಾದ ಶ್ರೀ ಭಾಸ್ಕರ ತಾಂಡೇಲ್ ಕಾರ್ಯಕ್ರಮಕ್ಕೆ ಬಂದಂತ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣಮೂರ್ತಿ ಭಟ್ಟ ಶಿವನಿ ಬುಕ್ ಸ್ಟಾಲ್ ಮಾಲಿಕರು ಹಾಜರಿದ್ದರು. ಅತಿಥಿಗಳಾಗಿ ಶ್ರೀ ಬಾಲಚಂದ್ರ ಮೇಸ್ತ. ಹೆರಿಗೆ ಮತ್ತು ಸ್ತ್ರೀರೋಗ ತಜ್ಞರು ಶಿರಾಲಿ, ಶ್ರೀ ಬೋನಿ ಫರ್ನಾಂಡಿಸ್. ಸೆಂಟ್ ಜೋಸೆಫ್ ಡೆಕೋರೇಷನ್ ಕಾಸರಕೋಡ, ಶ್ರೀಪ್ರಕಾಶ ತಾಂಡೇಲ್. ವಕೀಲರು ಹೊನ್ನಾವರ, ಶ್ರೀ ಜೈನ ಜಟಕೇಶ್ವರ ಯುವಕ ಸಮಿತಿಯ ಗೌರವ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿಗಳನ್ನು ಶ್ರೀ ಹರೀಶ್ ತಾಂಡೇಲ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳ ಮನರಂಜನೆ ಕಾರ್ಯಕ್ರಮ ನಂತರ ನೃತ್ಯಾಂಜಲಿ ನೃತ್ಯ ಕಲಾ ಕೇಂದ್ರ ಹೊನ್ನಾವರ ವಿದುಷಿ ವಿನುತಾ ಹೆಗಡೆ ತಂಡದಿಂದ ಭರತನಾಟ್ಯ ನಂತರ ಓಶಿಯನ್ ಹಾರ್ಟ್ ಬೇಕರ್ ಇವರಿಂದ ಡ್ಯಾನ್ಸ್ ಕಾರ್ಯಕ್ರಮ ನಡೆಯಿತು.