ಗುಡ್ಡಗಾಡು ಜಿಲ್ಲೆ ಆಗಿರುವ ಉತ್ತರಕನ್ನಡ ಜಿಲ್ಲೆ ಅತ್ಯಧಿಕ ಹಳ್ಳಿಗಳು ಗ್ರಾಮೀಣ ಪ್ರದೇಶಗಳಿಂದ ದೂರ ಇದೆ .ಹಳ್ಳಿಗಳಲ್ಲಿ ಹೆಚ್ಚಿನ ಮನೆಗಳು ದೂರದೂರ ಇರುತ್ತಿದ್ದು ಒಂದು ಮನೆಯಿಂದ ಇನ್ನೊಂದು ಮನೆಗೆ ಕಾಲುದಾರಿಗಳೇ ಸಂಪರ್ಕಮಾರ್ಗವಾಗಿದೆ.ಹಿಂದಿನ ಜನರು ಬಡತನವಿದ್ದರೂ ಸಾಂಘಿಕ ಬದುಕಿನಲ್ಲಿ ನಂಬಿಕೆ ಉಳ್ಳವರಾದ್ದರಿಂದ ಕುಡಿಯುವ ನೀರಿಗೆ ಹಾಗೂ ಓಡಾಡುವ ಹಾದಿಗೆ ಎಂದೂ ತೊಂದರೆಯನ್ನು ಉಂಟುಮಾಡುತ್ತಿರಲಿಲ್ಲ.ಬದಲಿಗೆ ಅಪರಿಚಿತ ದಾರಿ ಹೋಕರನ್ನು ಮನೆಗೆ ಕರೆದು ಅನ್ನ ಆಹಾರ ನೀಡಿ ಉಪಚರಿಸಿ ವಿಶ್ರಾಂತಿಗೂ ಅವಕಾಶ ಮಾಡಿಕೊಡುತಿದ್ದರು.ಆದರೆ ಇಂದು ಬಹುತೇಕ ಹಳ್ಳಿಗಳಲ್ಲಿ ಜಮೀನುಗಳು ಮಾರಾಟವಾಗಿದೆ.ಗದ್ದೆಗಳು ಮಾಯವಾಗಿ ಅಲ್ಲೆಲ್ಲ ಮನೆಗಳು ತಲೆಎತ್ತಿನಿಂತಿದೆ .

ಅವಿಭಕ್ತಕುಟುಂಬಗಳು ಚುರುಚೂರಾಗಿ ಮನೆಯ ಜೊತೆಗೆ ಮನಸುಗಳು ಕೂಡ ಛಿದ್ರವಾಗಿದೆ.ಮನೆಯ ಸುತ್ತ ಬೇಲಿ ಪಾಗಾರಗಳು ಎದ್ದು ನಿಂತಿದೆ.ಇದರ ಪರಿಣಾಮ ಅನಾದಿಕಾಲದಿಂದಲೂ ಒಂದು ಮನೆಯಿಂದ ಇನ್ನೊಂದು ಮನೆಗೆ ಊರಿನಿಂದ ಊರಿಗೆ ಸಂಪರ್ಕ ಸಾಧಿಸುವ ಕಾಲುದಾರಿಗಳ ಮೇಲೂ ಬಿದ್ದಿದೆ.ನಕಾಶೆಯಲ್ಲಿ ಧಾಖಲಾಗಿಲ್ಲ ಎಂಬಕಾರಣಕ್ಕೆ ಕೆಲವು ಸ್ವಾರ್ಥಿಗಳು ತಮ್ಮ ಹಿತ್ತಲಿನಮೂಲಕ ಹಾದು ಹೋಗುವ ಕುರುಹುಗಳನ್ನು ನಾಶ ಮಾಡುವ ಹಾದಿಯಲ್ಲಿ ಬೇಲಿ,ಪಾಗಾರು ಕಟ್ಟುವ ತಗ್ಗುತೋಡುವ ಕುಹಕದಲ್ಲಿ ತೊಡಗಿಸಿಕೊಂಡಿರುವುದರಿಂದ ಕಾಲುದಾರಿಗಳು ಕಾಣೆಯಾಗುತ್ತಿದೆ.ಇದರ ಪರಿಣಾಮ ಕೆಲವು ಕಡೆಗಳಲ್ಲಿ ಸಂಚಾರವೇ ಅಸಾಧ್ಯ ಎನ್ನುವ ವಾತಾವರಣ ನಿರ್ಮಾಣವಾಗುತ್ತಿದೆ.ಗ್ರಾಮ ಪಂಚಾಯತದ ನ್ಯಾಯ ಸಮಿತಿ ಹಾಗೂ ಕಂದಾಯ ಇಲಾಖೆಗಳ ಅಂಗಳದಲ್ಲಿ ಅನೇಕ ದೂರುಗಳು ಬಂದು ಬಗೆಹರಿಯದೇ ಕುಳಿತುಕೊಳ್ಳುತ್ತಿದೆ.ಕೆಲವೆಡೆ ಶವ ಒಯ್ಯಲು ಸತಾಯಿಸಿದ ಸನ್ನಿವೇಶಗಳೂ ನಿರ್ಮಾಣವಾದದ್ದಿದೆ. ಇದು ಅತ್ಯಂತ ಜಟಿಲವಾದ ಸಮಸ್ಯೆ ಆಗಿದ್ದು ಅಶಕ್ತರು ಅತೀಕಡಿಮೆ ಜಮೀನು ಹೊಂದಿದವರು ಹಾಗೂ ಕಾನೂನಿನ ಅರಿವುಇಲ್ಲದ ಮುಗ್ಧಜನರು ಈ ಸಮಸ್ಯೆಯನ್ನು ಜಿಲ್ಲೆಯ ಹಳ್ಳಿಗಾಡಿನಲ್ಲಿ ಅನುಭವಿಸುತ್ತಿದ್ದಾರೆ.ಮಾನವೀಯತೆ ಅನುಕಂಪಗಳು ಸತ್ತು ಹೋಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಅನಾದಿಕಾಲದ ಕಾಲುದಾರಿಗಳೆಲ್ಲವನ್ನೂ ಸರಕಾರವೇ ಕಾನೂನು ರೀತಿಯಲ್ಲಿ ಸಕ್ರಮಗೊಳಿಸಿ ದಾಖಲಿಸಿ ಧ್ವನಿಇಲ್ಲದ ಅಮಾಯಕ ಜನರಪಾಲಿಗೆ ಧ್ವನಿಯಾಗಬೇಕಿದೆ.

RELATED ARTICLES  ಶಾಲಾಭಿವೃದ್ಧಿಗೆ ಶ್ರಮಿಸಿದ ಮೂವರು ಎಂಜಿನೀಯರುಗಳನ್ನು ಸನ್ಮಾನಿಸುವ ಮೂಲಕ ವಿವೇಕನಗರದಲ್ಲಿ ಎಂಜಿನೀಯರ್ ದಿನಾಚರಣೆ 


ಈ ಬಗ್ಗೆ ಜಿಲ್ಲೆಯ ಸಂಸದರು ಶಾಸಕರು ಮುಂದೆ ಬರಲಿರುವ ಮಂತ್ರಿಗಳು ಸರಕಾರದ ಗಮನಸೆಳೆದು ಸೂಕ್ತ ನೀತಿಯನ್ನು ರೂಪಿಸಬೇಕೆಂಬುದು ಸಂತ್ರಸ್ತರ ಅಭಿಪ್ರಾಯವಾಗಿದೆ.

RELATED ARTICLES  ಅರಣ್ಯ ಇಲಾಖೆ ಮತ್ತು ಯುವ ಬ್ರೀಗೇಡ್ ಶಿರಸಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ