ಕಾರವಾರ : ತಾಲೂಕಿನಲ್ಲಿ ಪ್ರಾರಂಭಿಸಿದ ಸಾಗರಮಾಲಾ ಯೋಜನೆ ವಿರೋಧಿಸಿ ಇಂದು ಕಾರವಾರ ತಾಲೂಕು ಬಂದ್ ಗೆ ಮೀನುಗಾರರು ಹಾಗೂ ವಿವಿಧ ಸಂಘಟನೆ ಕರೆ ಕೊಟ್ಟಿದ್ದವು. ಇದರಿಂದಾಗಿ ನಗರದಾಧ್ಯಾಂತ ಅಂಗಡಿ ಮುಂಗಟ್ಟುಗಳು ,ಸಾರಿಗೆ ಸಂಪರ್ಕ ಸೇರಿದಂತೆ ಎಲ್ಲವೂ ಬಂದ್ ಮಾಡಲಾಗಿದೆ.
ಇದಲ್ಲದೇ ಶಾಲಾ ಕಾಲೇಜುಗಳಿಗೂ ರಜೆ ನೀಡಲಾಗಿದ್ದು ಕಾರವಾರ ನಗರ ಜೀವನ ಸ್ಥಬ್ಧವಾಗಿದೆ.
ಇನ್ನು ಬಂದ್ ಹಿನ್ನಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಬಿಗಿ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಎಲ್ಲೆಡೆ ಬಿಗಿ ಬಂದವಸ್ತ್ ಕಲ್ಪಿಸಲಾಗಿದೆ. ನೂರಾರು ಸಂಕ್ಯೆಯಲ್ಲಿ ಪೋಲೀಸರು ಜಮಾವಣೆ ಗೊಂಡಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿ ಇಟ್ಟಿದ್ದಾರೆ.