ಶಿರಸಿ: ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಸೇವಾಸಮಿತಿ ಯನ್ನು ಸಾಮಾಜಿಕ ಸೇವೆಯ, ಸದುದ್ದೇಶದಿಂದ ಸ್ಥಾಪಿಸಿದ್ದೇವೆ. ಸಮಿತಿಯ ಸಾಮಾಜಿಕ ಸೇವಾ ಕಾರ್ಯದ ಅಂಗವಾಗಿ ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ನಿಮಿತ್ತ ,ಜನವರಿ 21/1/2020 ಬೆಳಿಗ್ಗೆ ,,10.30 ಕ್ಕೆ ಮಂಗಳವಾರ ಸ್ಥಳ ~#~ರುದ್ರ ದೇವರ ಮಠ ದಲ್ಲಿ ನೇತ್ರ ದಾನದ ಜಾಗ್ರತಿ ಶಿಬಿರ. ಮತ್ತು ಸಾರ್ವಜನಿಕ ಅನ್ನಪ್ರಸಾದ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನೇತ್ರ ದಾನದಿಂದ ಅಂದರ ಬದುಕಿಗೆ ಹೊಸ ಬೆಳಕು ನೀಡಲು ಸಾಧ್ಯವಿದೆ. ಆದರೆ ಈ ಬಗ್ಗೆ ಬಹಳಷ್ಟು ಜನರಿಗೆ ಸರಿಯಾದ ತಿಳುವಳಿಕೆ ಇಲ್ಲ. ಮೂಢನಂಬಿಕೆಗಳು ಮತ್ತು ಅರಿವಿನ ಕೊರತೆಯಿಂದಾಗಿ ನೇತ್ರದಾನ ಪ್ರಮಾಣ ನಿರೀಕ್ಷೆಯಷ್ಟು ಆಗುತ್ತಿಲ್ಲ. ಎಂಬುದು ತಜ್ಞ ವೈದ್ಯರುಗಳು ಹಾಗೂ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ನೇತ್ರದಾನದ ಬಗ್ಗೆ ಅರಿವು ಮೂಡಿಸಿ, ಈ ಬಗ್ಗೆ ಇರುವ ಅನುಮಾನಗಳನ್ನು ಹೋಗಲಾಡಿಸುವ ಪ್ರಯತ್ನವನ್ನು ಜಾಗೃತಿ ಶಿಬಿರದಲ್ಲಿ ಮಲ್ಲಿಕಾರ್ಜುನ ಗುರುಗಳು ರುದ್ರ ದೇವರ ಮಠ ಇವರ ಸಾನಿಧ್ಯದಲ್ಲಿ ಕಣ್ಣಿನ ತಜ್ಞ ವೈದ್ಯರಾದ ಡಾಕ್ಟರ್ _ಕೆ ವಿ ಶಿವರಾಮ್& ಆಮಂತ್ರಿತ ಅತಿಥಿಗಳು ನೇತ್ರದಾನದ ಬಗ್ಗೆ ಮಾಹಿತಿ ನೀಡಲಿದ್ದಾರೆ.