ಹೊನ್ನಾವರ:ಕಾರವಾರ ಶೈಕ್ಷಣಿಕ ಜಿಲ್ಲೆಯ 5 ತಾಲೂಕಿನ ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಹೊನ್ನಾವರದ ಆರ್.ಈ.ಎಸ್. ಪ್ರೌಢಶಾಲೆಯ ದೈಹಿಕ ಶಿಕ್ಷಕ ಮಹೇಶ ಜಿ. ಶೆಟ್ಟಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಕಾರವಾರ ಇದರ ನೂತನ ಪದಾಧಿಕಾರಿಗಳನ್ನು ಮೂರು ವರ್ಷಗಳ ಅವಧಿಗೆ ಸರ್ವಾನುಮತದಿಂದ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಕಾರವಾರದ ನ್ಯೂ ಪೊಮ್ಸೊಲ್‍ರ್ ಚೆಂಡಿಯಾ ಪ್ರೌಢಶಾಲೆಯ ದೈಹಿಕ ಶಿಕ್ಷಕ ತಿಮ್ಮಪ್ಪ ನಾಯಕ, ಕಾರ್ಯದರ್ಶಿಯಾಗಿ ಕುಮಟಾ ಜೆ.ಎಚ್.ಗೌಡ, ಕೋಶಾಧ್ಯಕ್ಷರಾಗಿ ಅಂಕೋಲಾದ ಶ್ರೀಧರ ನಾಯ್ಕ, ಸಹ ಕಾರ್ಯದರ್ಶಿಯಾಗಿ ಭಟ್ಕಳದ ನ್ಯೂ ಇಂಗ್ಲೀಷ್ ಪ್ರೌಢಶಾಲೆಯ ಎಸ್.ಎಂ.ನಾಯ್ಕ, ಕೃಷ್ಣ ಗೌಡ ಆಯ್ಕೆಯಾಗಿದ್ದಾರೆ.