ಕಾರವಾರ: ಪ್ರಸಕ್ತ ಸಾಲಿನ ಕದಂಬೋತ್ಸವದಲ್ಲಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಬೇಕು. ಆದಿಕವಿ ಪಂಪ ಓಡಾಡಿದ ಬನವಾಸಿ ನೆಲದಲ್ಲಿ ಕವಿಗೋಷ್ಠಿ ನಡೆಸದಿದ್ದರೆ ಕದಂಬೋತ್ಸವವೇ ಅಪೂರ್ಣವಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.


ಈ ಬಗ್ಗೆ ತಾವು ಜಿಲ್ಲಾಧಿಕಾರಿ ಮತ್ತು ಶಿರಸಿ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದ್ದು, ಅಗತ್ಯವಿದ್ದಲ್ಲಿ ಕವಿಗೋಷ್ಠಿ ನಿರ್ವಹಣೆಯನ್ನು ಜಿಲ್ಲಾ ಜಿಲ್ಲಾ ಕ.ಸಾ.ಪ ವಹಿಸಿಕೊಳ್ಳಲು ಸಿದ್ದವಿದೆ. ಮೊದಲು ಕವಿಗೋಷ್ಠಿಯನ್ನೇ ಮಾಡದೇ ಕದಂಬೋತ್ಸವ ನಡೆಸಲಾಗುತ್ತಿತ್ತು. ಜಿಲ್ಲಾ ಸಾಹಿತ್ಯ ಪರಿಷತ್ತಿನ ಹೋರಾಟದ ಫಲವಾಗಿ ಕವಿಗೋಷ್ಠಿ ಮತ್ತು ಕದಂಬರ ಬಗ್ಗೆ, ಪಂಪನ ಬಗ್ಗೆ ಇತಿಹಾಸ ಗೋಷ್ಠಿ ನಡೆಸಲು ಜಿಲ್ಲಾಡಳಿತ ಮುಂದಾಗಿತ್ತು. ಅನಂತರ ಇದೀಗ ಕವಿಗೋಷ್ಠಿ ಮಾಡುವ ನಿರ್ಧಾರದಿಂದ ಹಿಂದೆ ಸರಿದಂತೆ ಕಾಣುತ್ತದೆ. ಈ ನಿರ್ಧಾರಕ್ಕೆ ಅವಕಾಶ ಕೊಡದೇ ಕವಿಗೋಷ್ಠಿಯನ್ನು ಕದಂಬೊತ್ಸವದಲ್ಲಿ ಹಮ್ಮಿಕೊಳ್ಳುವುದು ಅರ್ಥಪೂರ್ಣ ಎಂದು ಅರವಿಂದ ಕರ್ಕಿಕೋಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಪ್ರಗತಿ ವಿದ್ಯಾಲಯ ಆಂಗ್ಲಮಾಧ್ಯಮ ಶಾಲೆ ಮೂರೂರಿನಲ್ಲಿ…How to conduct Program ತರಬೇತಿ


ಹಾಗೆಯೇ ಕಾರವಾರದ ಕಡಲತೀರದಲ್ಲಿ ನಡೆಯುವ ಕರಾವಳಿ ಉತ್ಸವದಲ್ಲೂ ಕವಿಗೋಷ್ಠಿ ಹಮ್ಮಿಕೊಳ್ಳಬೇಕು.
ಕೇವಲ ಹೊರ ರಾಜ್ಯದ ಸಿನಿಮಾ ನಟನಟಿಯರನ್ನು ಕರೆಸಿ ಪಾಶ್ಚಾತ್ಯ ಸಂಗೀತ ಹಮ್ಮಿಕೊಳ್ಳುವುದು ಸರಿಯಲ್ಲ. ನಮ್ಮ ಜಿಲ್ಲೆಯ ಸಾಹಿತ್ಯಕ ಮತ್ತು ಸಾಂಸ್ಕøತಿಕ ವೈಭವವನ್ನು ಜನರೆದುರು ಪ್ರದರ್ಶಿಸಿದರೆ ಕರಾವಳಿ ಉತ್ಸವಕ್ಕೆ ಇನ್ನಷ್ಟು ಬೆಲೆ ಬರುತ್ತದೆ. ಕದಂಬೋತ್ಸವ ಮತ್ತು ಕರಾವಳಿ ಉತ್ಸವಗಳಲ್ಲಿ ಕವಿಗೋಷ್ಠಿ ನಡೆಸದಿದ್ದರೆ ಸರಕಾರದ ಮಹಾತ್ವಾಕಾಂಕ್ಷೆಯ ಈ ಎರಡು ಉತ್ಸವಗಳು ಸಾಹಿತ್ಯಕ ವಲಯದಿಂದಲೇ ದೂರ ಉಳಿದಂತಾಗುತ್ತದೆ. ದಿನಕರ ದೇಸಾಯಿ, ಸು.ರಂ. ಎಕ್ಕುಂಡಿ, ವಿಸೀ, ಗೌರೀಶ ಕಾಯ್ಕಿಣಿ, ಜಿ.ಆರ್.ಪಾಂಡೇಶ್ವರ, ಬಿ.ಎಚ್.ಶ್ರೀಧರ ಮುಂತಾದವರೆಲ್ಲ ಸಾಹಿತ್ಯ ಕೃಷಿ ಮಾಡಿದ ಈ ಜಿಲ್ಲೆಯ ನೆಲವನ್ನು ಬರುಡು ನೆಲದದಂತೆ ಪರಿಗಣಿಸುವುದು ಬೇಡ ಎಂದು ಅರವಿಂದ ಕರ್ಕಿಕೋಡಿ ಅಭಿಪ್ರಾಯಪಟ್ಟಿದ್ದಾರೆ.

RELATED ARTICLES  ಜನಾನುರಾಗಿಯಾಗಿದ್ದ ಮೋಹನ ಭಟ್ ನಿಧನ.