ಯಲ್ಲಾಪುರ: ತಾಲೂಕಿನ ಬರಗದ್ದೆ ಸಮೀಪದ ಚಿಟ್ಟಾಮಕ್ಕಿಯಲ್ಲಿ ಪರೀಕ್ಷೆ ಭಯದಿಂದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಯಲ್ಲಾಪುರದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಲೋಕ ಕುಮಾರ ಶ್ರೀನಿವಾಸ ಭಟ್ಟ ಮೃತ ವಿದ್ಯಾರ್ಥಿ.
ಈತ ಮುಂಬರುವ ಪರೀಕ್ಷೆಗೆ ಸರಿಯಾಗಿ ಓದಿಕೊಳ್ಳದ ಕಾರಣ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.