ಕುಮಟಾ: ರೋಟರಿ ಸಂಸ್ಥೆಯು ಪಂಪ ಪ್ರಶಸ್ತಿ ಪುರಸ್ಕøತ ಮಾನವ್ಯ ಕವಿಯ 85 ನೆಯ ಜನ್ಮದಿನಾಚರಣೆಯ ನಿಮಿತ್ತ ಅವರನ್ನು ಇಲ್ಲಿಯ ನಾದಶ್ರೀ ಕಲಾಕೇಂದ್ರದಲ್ಲಿ ಆಪ್ತವಾಗಿ ಅಭಿನಂದಿಸಿತು. ಅಂತರಾಷ್ಟ್ರೀಯ ಸಹೋದರತ್ವದ ಭಾವ ಬೆಸೆವ ರೋಟರಿ ಸಂಸ್ಥೆ ತನ್ನ ಜನ್ಮದಿನದಂದು ಆಹ್ವಾನಿಸಿ ವಿಶಿಷ್ಠವಾಗಿ ಆಚರಿಸಿದ್ದಕ್ಕೆ ಕೃತಜ್ಞತೆ ತಿಳಿಸಿದ ಸನದಿ ಇಂದು ವಿಶ್ವಮಾನವನಾಗಿ ಜನಿಸಿದವರು ಬೆಳೆದಂತೆಲ್ಲ ಅಲ್ಪಮಾನವರಾಗಿ ಬದಲಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಪ್ರಸ್ತುತ ರಾಜಕೀಯ, ಸಾಮಾಜಿಕ ವಿದ್ಯಮಾನಗಳಿಂದ ನೊಂದು ನುಡಿದರು. ಸಾಹಿತ್ಯ, ಸಾಂಸ್ಕøತಿಕ ಸಂಬಂಧಗಳು ಮಾತ್ರ ಮನಸ್ಸನ್ನು ಒಗ್ಗೂಡಿಸಿ ಜಾತಿ-ಧರ್ಮಗಳ ಬೇಧಗಳನ್ನು ಅಳಿಸಿ ಹಾಕಬಲ್ಲವು ಎಂದು ಅಭಿಪ್ರಾಯಿಸಿದರು. ಕುಮಟಾ ರೋಟರಿಯು ಯಾವತ್ತೂ ಕವಿ, ಸಾಹಿತಿ, ಸಾಂಸ್ಕøತಿಕ ರಾಯಭಾರಿಗಳಿಗೆ ಗೌರವ ಪ್ರಧಾನ ಮಾಡುವುದರಿಂದ ಸಾಹಿತ್ಯ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

RELATED ARTICLES  ಉತ್ತರಕನ್ನಡಿಗರಿಗೆ ಬಿಗ್ ಶಾಕ್ …! ಭಟ್ಕಳದಲ್ಲಿ 12 ಜನರಲ್ಲಿ ಕೊರೋನಾ ಪಾಸಿಟೀವ್

ಪ್ರಾರಂಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ವಸಂತ ರಾವ್ ಸ್ವಾಗತಿಸಿ ಸನದಿಯ ಹೃದಯವೈಶಾಲತೆಯನ್ನು ಶ್ಲಾಘಿಸಿದರು. ರೊಟೋಲೈಟ್ ಪತ್ರಿಕೆ ಸಂಪಾದಕ ಎನ್.ಆರ್.ಗಜು ಸ್ವರಚಿತ ಕವನದ ಜೊತೆಗೆ ನಾಡಿನ ಕವಿ ವಿಷ್ಣು ನಾಯ್ಕ ವಿರಚಿತ ಸನದಿ ನಗು ಎಂಬ ಕವನವನ್ನು ವಾಚಿಸಿದರು. ರೊ.ಸುರೇಶ ಭಟ್ ಸನದಿ ಕುರಿತು ಸ್ವರಚಿತ ಚುಟುಕು ಓದಿ ಸಂಭ್ರಮಿಸಿದರು. ಡಾ.ದೀಪಕ ಡಿ.ನಾಯಕ ಮತ್ತು ರೊ. ಗುರುದಾಸ ಗಾಯ್ತೊಂಡೆ ಅಭಿನಂದನಾಪರ ಮಾತನಾಡಿದರು. ರೊಟೇರಿಯನ್ ಜಿ.ಜೆ.ನಾಯ್ಕ, ಜಯಶ್ರೀ ಕಾಮತ, ಸಂದೀಪ ನಾಯಕ, ಎಸ್.ವಿ.ಹೆಗಡೆ ನಂದೈಯನ್, ಗಣೇಶ ಎನ್.ಕಾಮತ ಮೊದಲಾದವರು ಸನದಿ ಜನ್ಮದಿನದ ಸಡಗರದಲ್ಲಿ ಪಾಲ್ಗೊಂಡು ಹರ್ಷಿಸಿದರು.

RELATED ARTICLES  ಜಿಯೋ ಗೆ ಟಕ್ಕರ್ ಕೊಡುವಂತೆ ಬಿಎಸ್ಎನ್ಎಲ್ ಲೈವ್ IPL ಮ್ಯಾಚ್ ನೋಡಲು ಈ ಆಫರ್ ನೀಡಿದೆ!