ಕುಮಟಾ : ತಾಲೂಕಿನ ಬಗ್ಗೋಣದ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ನಿರ್ಮಾಣದ ಶ್ರೀಮತಿ ತಾರಾಮತಿ ಹರಿಶ್ಚಂದ್ರ (ಕುಮಟಾ )ಅರ್ಪಿಸುವ ಸಂಜನಾ ಸಿನಿ ಆರ್ಟ್ಸ್ ರವರ ಲೋಕಲ್ ಟ್ರೈನ್ ಸಿನಿಮಾದ ಟ್ರೈಲರ್ ಇಂದು 20/1/2020 ರಂದು ಸಂಜೆ 5:04 ಕ್ಕೆ ನಿಮ್ಮ ಆಕಾಶ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.
ಚಂದನ ವನಕ್ಕೆ ಎಂಟ್ರಿ ಕೊಡಲಿರುವ ಈ ಹೊಸ ಚಿತ್ರ ತನ್ನದೆ ವಿಶೇಷತೆ ಹೊಂದಿದ್ದು ಬಹು ತಾರಾಗಣ ಹೊಂದಿದೆ. ಸುದ್ದಿ ತಿಳಿಯುತಿದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ದಿನೇ ದಿನೇ ಲೋಕಲ್ ಟ್ರೈನ್ ಸಿನಿಮಾದ ಕ್ರೆಜ್ ಹೆಚ್ಚಾಗುತ್ತಿದು ಕುತೂಹಲ ಮೂಡಿಸುತ್ತಿದೆ.
ಬಹುನಿರೀಕ್ಷಿತ ಲೋಕಲ್ ಟ್ರೈನ್ ಸಿನಿಮಾದ ಟ್ರೈಲರ್ ನಿಮ್ಮ ನೆಚ್ಚಿನ ಆಕಾಶ್ ಆಡಿಯೋ ಯೂಟ್ಯೂಬನಲ್ಲಿ ಯಿಂದು ಸಂಜೆ 5.04 ಕ್ಕೆ ವೀಕ್ಷಿಸಿ ಪ್ರೋತ್ಸಾಹಿಸುವಂತೆ ನಿರ್ಮಾಪಕ ಸುಬ್ರಾಯ ವಾಳ್ಕೆ ಸತ್ವಾಧಾರ ನ್ಯೂಸ್ ಮೂಲಕ ವಿನಂತಿಸಿದ್ದಾರೆ.