ಕುಮಟಾ: ಕೇಂದ್ರ ಸರ್ಕಾರವು ಕಾರವಾರದ ಟ್ಯಾಗೋರ್ ಕಡಲು ತೀರವನ್ನು ವಾಣಿಜ್ಯ ಬಂದರಾಗಿ ವಿಸ್ತರಣೆ ಮಾಡುವುದನ್ನು ವಿರೋಧಿಸಿ ಮೀನುಗಾರರು ಕಾರವಾರದಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆಯನ್ನು ಹಮ್ಮಿಕೊಂಡು, ಸರ್ಕಾರಕ್ಕೆ ಬಿಸಿಮುಟ್ಟಿಸಿದ್ದರು ಆದರೆ ಇದೀಗ ಮೀನಿನ ಬೆಲೆ ಏರಿಕೆ ಆಗುತ್ತಿದ್ದು ಮೀನು ಪ್ರಿಯರಿಗೆ ಇದು ಬಿಗ್ ಶಾಕ್ ಎಂಬಂತಾಗಿದೆ.
ಮೀನಿನ ಪೂರೈಕೆ ಸ್ಥಗಿತಗೊಂಡ ಕಾರಣ ದರದಲ್ಲಿ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದ್ದು, ಮೀನು ಕೊಂಡುಕೊಳ್ಳುವ ಗ್ರಾಹಕರಿಗೆ ಇದು ಹೊರೆಯಾಗಿ ಪರಿಣಮಿಸಿದೆ.
ಸಾಗರಮಾಲಾ ಯೋಜನೆ ಕಾಮಗಾರಿಯ ವಿರುದ್ಧ ಸಿಡಿದೆದ್ದ ಮೀನುಗಾರರ ಧರಣಿ 7 ನೆಯ ದಿನಕ್ಕೆ ಕಾಲಿಟ್ಟಿದ್ದು, ಮಾರುಕಟ್ಟೆಯಲ್ಲಿ ಮೀನಿನ ಕೊರೆತೆ ಉಂಟಾದ ಪರಿಣಾಮ ಮೀನಿನ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಮೀನು ಮಾರುಕಟ್ಟೆಯಲ್ಲಿ ಮೀನಿನ ದರ ಪ್ರತಿ ಕೆ.ಜಿಗೆ 500 ರೂ ನಿಂದ 600 ಆಗಿದೆ ಇದು ಖರೀದಿಸಲು ಕಷ್ಟವಾಗಿದೆ ಎನ್ನುತ್ತಾರೆ ಗ್ರಾಹಕರು.