ಕುಮಟಾ : ಕಳೆದ ೩೦ ವರ್ಷಗಳಿಂದ ವೃತ್ತಿಯ ಜೊತೆಗೆ ಪ್ರವೃತ್ತಿ ಯಾಗಿ ಸಮಾಜ ಸೇವೆ ಮಾಡಿಕೊಂಡು ಬಂದಿರುವ ಶ್ರೀ ಆರ್.ಕೆ ಬಾಲಚಂದ್ರ ಅವರು ಕೆನರಾ ಕಾಲೇಜು ಸೊಸೈಟಿಯ ಕುಮಟಾದ ಎ.ವಿ ಬಾಳಿಗಾ ಕಾಮರ್ಸ ಕಾಲೇಜಿನ ಕೆರಿಯರ್ ಗೈಡೆನ್ಸ ಸೆಲ್ ನ ವತಿಯಿಂದ ಮೂರು ದಿನಗಳ ತರಬೇತಿ ನಡೆಸಿಕೊಟ್ಟರು.
ಆರ್.ಕೆ ಬಾಲಚಂದ್ರ ಅವರು
ಈ ಸಲದ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಪಡೆದಿದ್ದು. ಈವರೆಗೆ ಸುಮಾರು ೩.೫೦ ಲಕ್ಷ ಕ್ಕೂ ಮಿಕ್ಕಿ ಶಿಭಿರಾರ್ಥಿಗಳನ್ನ ಉಚಿತವಾಗಿ ರಾಜ್ಯಾದ್ಯಂತ ಬ್ಯಾಂಕಿಂಗ್ ಹಾಗು ಇತರೆ ಸ್ಪರ್ಧಾತ್ಮಕ ಪರೀಕ್ಷೆ ಗಾಗಿ ತರಬೇತಿ ನೀಡಿದ್ದು. ೩೦೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ತಮ್ಮ ಬದುಕನ್ನ ಕಟ್ಟಿಕೊಂಡಿದ್ದಾರೆ. ಅವರು ಇಂದು ಪ್ರಾಯೋಗಿಕ ತರಬೇತಿ ನಡೆಸಿಕೊಟ್ಟರು.
ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ಇಂಟರ್ವ್ಯೂ ಎದುರಿಸುವುದು ಹೇಗೆ ಎಂಬ ಬಗ್ಗೆ ಪ್ರಾಯೋಗಿಕ ತರಗತಿ ನಡೆಸಿ ಮಾತನಾಡಿದ ಆರ್.ಕೆ ಬಾಲಚಂದ್ರ ಅವರು ಮಾತನಾಡಿ ಮಾರ್ಗದರ್ಶನ ನೀಡಿದರು.
ನಂತರ ಬಾಳಿಗಾ ಕಾಮರ್ಸ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಸ್ ಶೇಣ್ವಿ ಮಾತನಾಡಿ ಬಾಲಚಂದ್ರ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ವಿಷಯ ಕಲಿತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಇದ್ದರು.