ಕಾರವಾರ: ‘ಫೆಬ್ರುವರಿ 6, 7, 8 ಹಾಗೂ 9ರಂದು ಕರುನಾಡ ಕರಾವಳಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಕರುನಾಡ ಕರಾವಳಿ ಉತ್ಸವ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಮಾಜಿ ಶಾಸಕ ಸತೀಶ್ ಸೈಲ್ ಹೇಳಿದರು.


ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಜನವರಿ ೩೦ರಂದು ಸಂಜೆ ೫.೩೦ಕ್ಕೆ ಓಂ ಸಾಯಿ ಫ್ರೆಂಡ್ಸ್ ಅಮ್ಯೂಸ್‌ಮೆಂಟ್ ಪಾರ್ಕ್, ವಸ್ತು ಮಳಿಗೆ ಹಾಗೂ ಆಹಾರ ಮಳಿಗೆಗಳ ಉದ್ಘಾಟನೆ ನೆರವೇರಲಿದೆ. ಅದೇ ದಿನ ಸಂಜೆ ೬ ಗಂಟೆಯಿAದ ಕಿರಿಯರ ವಿಭಾಗ ಹಾಗೂ ಹಿರಿಯರ ವಿಭಾಗದವರಿಗಾಗಿ ಸೋಲೊ ನೃತ್ಯ ಸ್ಪರ್ಧೆ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರಾಜನ್ ಬಾನಾವಳಿಕರ್ (ಮೊ.ಸಂ: ೯೪೮೩೬ ೧೩೮೩೪), ವಿಜೇಂದ್ರ ಕುಮಾರೇಶ (ಮೊ.ಸಂ: ೯೯೦೨೬ ೮೩೦೦೩) ಅಥವಾ ಸೂರ್ಯಪ್ರಕಾಶ (ಮೊ.ಸಂ: ೮೩೧೦೮ ೧೫೭೬೧) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದು ತಿಳಿಸಿದರು.

RELATED ARTICLES  ಮೇಯಲು ಹೋಗಿದ್ದ ಕುರಿಗಳ ಮೇಲೆ ಚಿರತೆ ದಾಳಿ


‘ಜನವರಿ ೩೧ರಂದು ಮಧ್ಯಾಹ್ನ ೨.೩೦ಕ್ಕೆ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸಲು ಆಸ್ತಕರಿರುವ ತಂಡಗಳು ಮೊ.ಸಂ: ೯೯೪೫೭ ೪೧೫೭೫ಗೆ ಕರೆಮಾಡಿ ನೋಂದಾಯಿಸಿಕೊಳ್ಳಬಹುದು. ಫೆಬ್ರುವರಿ ೧ರಂದು ಸಂಜೆ ೩ ಗಂಟೆಗೆ ಟೀಮ್ ಮಂಗಳೂರಿನ ದಿನೇಶ ಹೊಳ್ಳ ಉಪಸ್ಥಿತಿಯಲ್ಲಿ ಗಾಳಿಪಟ ಉತ್ಸವ ನಡೆಯಲಿದೆ. ಇದರಲ್ಲಿ ಭಾಗವಹಿಸಲು ಇಚ್ಛಿಸುವವರು ಎನ್.ದತ್ತಾ (ಮೊ.ಸಂ: ೯೮೪೫೧ ೧೫೨೧೧) ಹಾಗೂ ಅರವಿಂದ ಗುನಗಿ (ಮೊ.ಸಂ: ೯೦೩೫೨ ೬೦೧೧೮) ಅವರನ್ನು ಸಂಪರ್ಕಿಸಬಹುದು. ಫೆಬ್ರುವರಿ ೨ರಂದು ಬೆಳಿಗ್ಗೆ ೯ಗಂಟೆಗೆ ಶ್ವಾನ ಪ್ರದರ್ಶನ ಏರ್ಪಡಿಸಲಾಗಿದ್ದು ಈ ಬಗೆಗಿನ ಮಾಹಿತಿಗಾಗಿ ಗಣೇಶ್ (ಮೊ.ಸಂ: ೮೭೪೭೯ ೭೩೭೨೦) ಅವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು. ಅದೇ ದಿನ ಸಂಜೆ ೩ ಗಂಟೆಗೆ ಅಜ್ವಿ ಓಶಿಯನ್ ಸಭಾಂಗಣದಲ್ಲಿ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಹಾಗೂ ಪಾರಿತೋಷಕವನ್ನು ಫೆಬ್ರುವರಿ ೬ರಂದು ಮಯೂರವರ್ಮ ವೇದಿಕೆಯಲ್ಲಿ ನಡೆಯುವ ಕರುನಾಡ ಕರಾವಳಿ ಉತ್ಸವದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುತ್ತದೆ. ಇದರೊಂದಿಗೆ ಕಾರ್ಯಕ್ರಮದಲ್ಲಿ ವೀರ ಯೋಧರಿಗೆ ಸನ್ಮಾನ, ಸ್ಥಳೀಯ, ರಾಜ್ಯ ಮತ್ತು ರಾಷ್ಟಿçÃಯ ಮಟ್ಟದ ಕಲಾವಿದರಿಂದ ಸಂಗೀತ, ನೃತ್ಯ, ಯಕ್ಷಗಾನ ರೂಪಕ, ಹಾಸ್ಯ ಮತ್ತು ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಎನ್.ದತ್ತಾ, ಗಣೇಶ್ ಮೊದಲಿಯಾರ್, ಸಂತೋಷ್ ನಾಯ್ಕ ಪೂನಮ್ ಪ್ರಸಾದ್, ಆನಂದ ಮಡಿವಾಳ, ದೀಪಕ್ ಕುಡಾಳಕರ್, ಅರವಿಂದ ಗುನಗಿ, ಸೂರ್ಯಪ್ರಕಾಶ್ ಬಶೆಟ್ಟಿ, ಮದನ ಗುನಗಿ, ಮನೋಜ್ ಗುನಗಿ, ಸಮೀರ ನಾಯ್ಕ ಇದ್ದರು.

RELATED ARTICLES  ಡಿ:16 ರಂದು ದಾಂಡೇಲಿಯಲ್ಲಿ ಶ್ರೀ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮ.