ಗೋಕರ್ಣ:  ಐ.ಟಿ ದಾಳಿಯಿಂದ ತೊಂದರೆಗೊಳಗಾಗಿದ್ದ ಪವರ್ ಮಿನಿಸ್ಟರ್ ಡಿ.ಕೆ ಶಿವಕುಮಾರ್ ರವರಿಗೆ ಶನಿ ಕಂಟಕ  ನಿವಾರಣೆಯಾಗುವಂತೆ ತಾಯಿ ಗೌರಮ್ಮ ಇಂದು ರಾತ್ರಿ ವೇಳೆ ಗೋಕರ್ಣದ ಮಹಬಲೇಶ್ವರನ ಆತ್ಮ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ರು.  ಶ್ರಾವಣ ಮಾಸದ ಜೊತೆಯಲ್ಲಿ  ಶನಿವಾರದ ಸೂರ್ಯಾಸ್ತದ ನಂತರ ತ್ರಯೋದಶಿ ಬಂದಿದ್ದರಿಂದ  ವಿಶೇಷ ವಾಗಿ ಶನಿಪ್ರದೋಷ ಹಿನ್ನೆಲೆಯಲ್ಲಿ ಸೂರ್ಯಾಸ್ತದ ನಂತರ ಆತ್ಮ ಲಿಂಗಕ್ಕೆ ಹಾಗೂ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿದ್ರು.ಇದಲ್ಲದೇ ತಮ್ಮ ಮಗನಿಗೆ ಒದಗಿದ ಕಂಟಕದಿಂದ ಪಾರಾಗಲು ವಿಶೇಷ ರುದ್ರ ಹವನ ಹೋಮವನ್ನು ನೆರವೇರಿಸಿದ್ರು. ಡಿ.ಕೆ ಶಿವಕುಮಾರ್ ಜಾತಕದ ಕುಂಡಲಿಯಲ್ಲಿ ಶನಿದೋಷ ವಿರುವುದರಿಂದಾಗಿ ಈ ಪೂಜೆಯನ್ನು ನೆರವೇರಿಸಲಾಗಿದೆ ಎಂದು ದೇವಾಲುದ ಮೂಲಗಳು ತಿಳಿಸಿವೆ.
ವಿಶೇಷವಾಗಿ ಶನಿವಾರದ ಸೂರ್ಯಾಸ್ತದ ವೇಳೆ ತ್ರಯೋದಶಿ ಬರುವುದರಿಂದ ಇಂದು ಶನಿ ಕಂಟಕವಿರುವವರು ಈಶ್ವರನ ಆರಾಧನೆ ನಡೆಸಿ ಆತ್ಮಲಿಂಗ ಪೂಜೆಗೈದರೆ ಈಶ್ವರನ ಕೃಪಾಶೀರ್ವಾದ ಅವರ ಮೇಲೆ ಆಗುತ್ತದೆ ಎಂಬ ನಂಬಿಕೆಯಿದೆ. ಈ ಸಮಯದಲ್ಲಿ ರುದ್ರ ಹವನ ಮಾಡಿಸಿದಲ್ಲಿ ಶನಿ ದೋಷದಿಂದ ಬಂದ ತೊಂದರೆಗಳು ನಿವಾರಣೆಯಾಗಿ ಶನಿ ಶಾಂತಿಯಾಗುತ್ತಾನೆ ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಸೂರ್ಯಾಸ್ತದ ಸಮಯದಲ್ಲಿ ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ತಮ್ಮ ಮಗನ ಹೆಸರಿನಲ್ಲಿ  ಪೂಜೆ ನೆರವೇರಿಸಿದ್ದಾರೆ.

RELATED ARTICLES  ಯಕ್ಷಗಾನ‌ ಲೋಕದ ಗಾನ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ.