ಹೊನ್ನಾವರ: ತಾಲೂಕಿನ ಹೊಸಾಡದಲ್ಲಿ 1 ನೇ ತರಗತಿ ವಿದ್ಯಾರ್ಥಿ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಘಟನೆ ನಡೆದಿದೆ.

ಮೃತ ಬಾಲಕನನ್ನು ಲೋಹಿತ ಮಂಜುನಾಥ ಗೌಡ ಎಂದು ಗುರ್ತಿಸಲಾಗಿದೆ. ಈತ ಕಳೆದ 3 ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದು ಔಷಧಿಯನ್ನು ಪಡೆಯುತ್ತಿದ್ದ. ಹೀಗಿರುತ್ತಾ ಮಂಗಳವಾರದಂದು ಚೌಡಿ ಪೂಜೆಗೆಂದು ತಾಯಿ ಬೇಬಿ ಮಂಜುನಾಥ ಗೌಡ ಇವರು ತಾಲೂಕಿನ ಹೊಸಾಡಗೆ ಕರೆದುಕೊಂಡು ಹೋಗುತ್ತಿದ್ದಾಗ ಲೋಹಿತನಿಗೆ ಬೆಳಿಗ್ಗೆ 9-30 ಗಂಟೆಗೆ ಉಸಿರಾಟದ ತೊಂದರೆಯಾಗಿದೆ ಎನ್ನಲಾಗಿದೆ. ಚಿಕಿತ್ಸೆಗೆಂದು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ಕರೆ ತಂದರಾದರೂ ಬದುಕಿರಲಿಲ್ಲ ಎನ್ನಲಾಗಿದೆ.

RELATED ARTICLES  ಶ್ರೀ ಮಹಾಸತಿ ಕ್ರೀಡಾಬಳಗ ಹರೀಟಾ ಇವರ ಆಶ್ರಯದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ