ಹಳೆಯ ವಿದ್ಯಾರ್ಥಿ ಗಳ ಸಂಘ ಹಾಗೂ ಜನಪರ ಹೋರಾಟ ವೇದಿಕೆ ಯ ಆಶ್ರಯ ದಲ್ಲಿ ಮುಸುಗುಪ್ಪೆಯಲ್ಲಿ ಸಂಕ್ರಾಂತಿ ಸೌರಭ ಕಾರ್ಯಕ್ರಮ ಜರುಗಿತು.ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಗಜಾನನ ಪೈ ಹಾಗೂ ಬಿ.ಜೆ.ಪಿ ಮುಖಂಡ ಶ್ರೀ ಎಂ. ಜಿ ಭಟ್ ಜಂಟಿ ಯಾಗಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಈ ಸಂಧರ್ಭ ದಲ್ಲಿ ಗಜಾನನ ಪೈ ಮಾತನಾಡಿ ಸಂಘಟನೆಯ ಕಾರ್ಯಕರ್ತರ ಶ್ರಮ ಶ್ಲಾಘನಿಯ, ಇಲ್ಲಿ ಇಂತಹ ಸಂಘಟನೆ ಇದ್ದಿದ್ದು ಸಂತೋಷವಾಗಿದೆ ಎಂದರು.
ಈ ಸಂಧರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರಾದ ಎಂ ಜಿ ಭಟ್ ಮಾತನಾಡಿ ಸ್ವಾರ್ಥ ರಹಿತ ಸಮಾಜ ಸೇವೆಗೆ ನಾವೆಲ್ಲ ಬದ್ಧರಾಗಬೇಕು ಅದರಿಂದ ನಮ್ಮ ಜೀವನ ಸಾರ್ಥಕ ಆಗುವುದು. ಇತ್ತೀಚಿಗೆ ಪದ್ಮಶ್ರೀ ಪ್ರಶಸ್ತಿ ಪಡೆದ ತುಳಸಜ್ಜಿ ಯ ಪರಿಸರ ಪ್ರೇಮ ನಮ್ಗೆಲ್ಲಾ ಮಾದರಿ ಲಕ್ಷ ಗಟ್ಟಲೆ ಮರಗಳನ್ನು ನೆಡುವ ಮೂಲಕ ಅವರು ತೋರಿದ ಪರಿಸರ ಪ್ರೇಮ ಹಾಗೂ ಸಾಮಾಜಿಕ ಜಾಗ್ರತಿ ಎಲ್ಲರಿಗು ಒಂದು ಪಾಠ ಇನ್ನು ನಾವು ಪ್ರಕೃತಿ ಯನ್ನು ಹಾಳು ಮಾಡುವುದನ್ನು ಬಿಟ್ಟು ಮರಗಳನ್ನು ರಕ್ಷಣೆ ಮಾಡಿ, ಬೆಳೆಸಬೇಕು ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ಅಧ್ಯಕ್ಷರಾದ ಶ್ರೀ ಭಾಸ್ಕರ್ ಪಟ ಗಾರ ಮಾತನಾಡಿ ನಾವು ಕನ್ನಡ ಶಾಲೆಯಲ್ಲಿ ಮಕ್ಕಳನ್ನು ಓದಿಸಬೇಕು ಕನ್ನಡ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು. ಬಿಜೆಪಿ ಯ ಮಾಜಿ ಅಧ್ಯಕ್ಷ ರಾದ ಶ್ರೀ ಕುಮಾರ್ ಮಾರ್ಕಾಂಡೆ ಮುಖ ಮಂಟಪ ಉದ್ಘಾಟನೆ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿ ಸುಮಂಗಲ ಹೆಗ್ಡೆ, ನಾಟಿ ವೈದ್ಯ ರಾದ ತುಳಸು ಗೌಡ, ಹುಲಿಯಪ್ಪ ಗೌಡ, ಈರೀ ಗೌಡ, ಇವರನ್ನು ಸನ್ಮಾನಿಸಲಾಯಿತು. ಊರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಈ ಸಂಧರ್ಭದಲ್ಲಿ ಶಾಲೆಯ ರಿಪೇರಿ ಹಾಗೂ ಇನ್ನಿತರ ಬೇಡಿಕೆಗಳನ್ನು ಗಜಾನನ ಪೈ ಅವರಿಗೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಕಲ್ಪನಾ ಗೌಡ,ನಾರಾಯಣ ಗೌಡ, ಕುಪ್ಪ ಗೌಡ, , ಬೀರು ಗೌಡ, ವಿ. ಎಸ್. ಗೌಡ, ವಿಮಲಾ ನಾಯ್ಕ, ಎಂ. ಡಿ. ಭಂಡಾರಿ, ಇದ್ದರು. ಸಂಘಟನೆ ಯ ಕಾರ್ಯಕರ್ತರು ಕಾರ್ಯಕ್ರಮ ವನ್ನು ತುಂಬಾ ಅಚ್ಚುಕಟ್ಟಾಗಿ ನೆರವೇರಿಸಿದ್ದು ವಿಶೇಷವಾಗಿತ್ತು.