ಹೊನ್ನಾವರ : ತಾಲೂಕಿನ ಕಡ್ಲೆ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ನಿನ್ನೆ ತಡರಾತ್ರಿ ನಡೆದಿದೆ.
ನೀಲ್ಕೋಡ ಕೂಸ್ಕೆರೆ ಮಾಸ್ತಿಮನೆ ಮತ್ತು ಉಪ್ಪಲೆ ಕ್ರಾಸಿನ ಮಾಸ್ತಿ ಮನೆಯ ಹುಂಡಿ ಹಣವನ್ನ ಕಳ್ಳರು ದೋಚಿದ್ದಾರೆ.
ಕಡ್ಲೆ ಕ್ರಾಸ್ ನ ವಿನಾಯಕ ಮಡಿವಾಳ, ಗಣಪತಿ ಮಡಿವಾಳ, ಕೃಷ್ಣ ಗೌಡ, ಹಾಣಿ ಗೌಡ, ಪೆಡೆ ಬಟ್ಟರ ಗೂಡಂಗಡಿಗಳ ಗಲ್ಲಿ ಹಣವನ್ನ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಪ್ರಶಾಂತ ಮಡಿವಾಳನ ಕಿರಾಣಿ ಅಂಗಡಿಯ ಬೀಗ ಮುರಿಯಲು ಸಾಧ್ಯವಾಗದೇ ಬಿಟ್ಟು ಹೊಗಿದ್ದಾರೆ.