ಹೊನ್ನಾವರ: ಪಿ.ಎಸ್.ಕಾಮತ್ ಸ್ಮರಣಾರ್ತ ದಿನಾಂಕ 25-1-2020 ರಂದು ಕೆನರಾ ವೆಲ್‍ಪೇರ್ ಟ್ರಸ್ಟನ ದಿವೇಕರ ಕಾಮರ್ಸ ಕಾಲೇಜು ಕಾರವಾರದಲ್ಲಿ ಜರುಗಿದ ಜಿಲ್ಲಾಮಟ್ಟದ 9 ನೇ ಅಂತರ್ ಕಾಲೇಜು ಚರ್ಚಾ ಸ್ಪರ್ಧೆಯಲ್ಲಿ ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಮೇಧಾ ಶಂಕರ ಭಟ್ಟ ಇವಳು ತೃತೀಯ ಸ್ಥಾನದೊಂದಿಗೆ ರೂ. 20,000 ನಗದು ಬಹುಮಾನ ಪಡೆದಿರುತ್ತಾಳೆ ಪದವಿ ಪೂರ್ವ, ಪದವಿ ಮತ್ತು ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳು ಭಾಗವಹಿಸಿದ ಸ್ಪರ್ಧೆಯಲ್ಲಿ ಈಕೆ ಬಹುಮಾನ ಪಡೆದಿರುವುದು ವಿಶೇಷವಾಗಿದೆ.
ಇವಳ ಸಾಧನೆಯನ್ನು ಕಾಲೇಜಿನ ಘನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿರುತ್ತಾರೆ.