ಶಿರಸಿ: ನಗರ ಬಿ.ಜೆ.ಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ನಗರ ಸಭಾ ಸದಸ್ಯೆ ದೀಪಾ ಮಹಾಲಿಂಗಣ್ಣನವರ ಪ್ರಧಾನ ಕಾರ್ಯದರ್ಶಿಗಳಾಗಿ ಸಂಗೀತಾ ಶೆಟ್ಟಿ, ಶಿಲ್ಪಾ ನಾಯ್ಕ ಆಯ್ಕೆಯಾಗಿದ್ದಾರೆ.


ಬಿ.ಜೆ.ಪಿ ಕಛೇರಿಯಲ್ಲಿ ಪ್ರಮುಖರ ಸಭೆಯಲ್ಲಿ ಒಮ್ಮತದ ಆಯ್ಕೆ ನಡೆದಿದೆ. ಸಮಿತಿಗೆ ಇನ್ನುಳಿದ ಮಹಿಳಾ ಪದಾಧಿಕಾರಿಗಳನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು. ನಗರ ಮಂಡಳ ಅಧ್ಯಕ್ಷ ರಾಜೇಶ ಶೆಟ್ಟಿ ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ ತಿರುಮಲೆ, ಜಗದೀಶ ನಾಯ್ಕ ಹಾಗೂ ಪ್ರಮುಖರಾದ ಶ್ರೀಕಾಂತ ನಾಯ್ಕ, ವಿನಾಯಕ ಹೆಗಡೆ, ನಂದನ ಸಾಗರ, ವೀಣಾ ಭಟ್ಟ್, ಶೋಭಾ ನಾಯ್ಕ ಮತ್ತು ನಗರಸಭಾ ಮಹಿಳಾ ಸದಸ್ಯರು ಹಾಗೂ ಶಿರಸಿ ಮಹಿಳಾ ಪ್ರಮುಖರು ಭಾಗವಹಿಸಿದ್ದರು.

RELATED ARTICLES  ಶರನ್ನವರಾತ್ರಿ ಉತ್ಸವ ಮನಸೆಳೆದ ಉಮೇಶ ಮುಂಡಳ್ಳಿ ಭಕ್ತಿ ಸಂಗೀತ


ವರದಿ: ಎನ್ ರಾಮು ಹಿರೇಗುತ್ತಿ