ಕುಮಟಾ: ಹಿರೇಗುತ್ತಿ ವಲಯದಲ್ಲಿ “ಚಿಣ್ಣರ ವನ ದರ್ಶನ” ಎಂಬ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದು ಮತ್ತು ಅರಣ್ಯಗಳ/ವನ್ಯಜೀವಿ ಸಂಕುಲಗಳ ಕುರಿತು ಅವರ ದೃಷ್ಟಿಕೋನ ಬದಲಾಯಿಸಿ, ಅರಣ್ಯಗಳ ಅಳಿವು ಮತ್ತು ಅಭಿವೃದ್ಧಿಯಲ್ಲಿ ಅವರನ್ನೂ ಪಾಲುದಾರರನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಗೇರುಸೊಪ್ಪಾ ವಲಯದ ಇಕೊ ಪಾರ್ಕ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತಿಳುವಳಿಕೆ ಮೂಡಿಸುವುದಕ್ಕೋಸ್ಕರ ಹಿರೇಗುತ್ತಿ ವಲಯ ವ್ಯಾಪ್ತಿಯ ಸೆಕೆಂಡರಿ ಹೈಸ್ಕೂಲ್, ಹಿರೇಗುತ್ತಿಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ದಿನಾಂಕ 27-01-2020 ರಂದು ಶ್ರೀ ನರೇಶ ಜಿ.ವಿ ವಲಯ ಅರಣ್ಯಾಧಿಕಾರಿ ಹಿರೇಗುತ್ತಿ ಹಾಗೂ ರಾಮು ಕೆಂಚನ್ ಉಪಾಧ್ಯಕ್ಷರು ಮಹಾಬಲೇಶ್ವರ ಅರ್ಬನ್ ಬ್ಯಾಂಕ್ ಗೋಕರ್ಣ ಚಾಲನೆ ನೀಡಿದರು. ಸದರಿ ಕಾರ್ಯಕ್ರಮದಲ್ಲಿ ಶ್ರೀ ಪ್ರದೀಪ ನಾಯ್ಕ, ಉಪವಲಯ ಅರಣ್ಯಾಧಿಕಾರಿ ಹಿರೇಗುತ್ತಿ, ಶ್ರೀದೇವಿ ಪರಗಣ್ಣನವರ, ಉಪವಲಯ ಅರಣ್ಯಾಧಿಕಾರಿ ಕಾಮಗಾರಿ, ಶ್ರೀ ಗಂಗಾಧರ ಗೌಡ, ಶ್ರೀ ದುರ್ಗೇಶ ಬಿ ಹರಿಕಂತ್ರ, ಶ್ರೀ ಅರುಣ ನಾಯ್ಕ ಹಾಜರಿದ್ದರು. ಸದರಿ ಕಾರ್ಯಕ್ರಮದಲ್ಲಿ ಶ್ರೀ ಪಿ.ವಿ.ಭಟ್ಟ್ ಪಕ್ಷಿ ತಜ್ಞರು, ಶ್ರೀ ಪವನ ನಾಯ್ಕ ಉರಗ ತಜ್ಞರು, ಪ್ರಾಣಿ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು. ಚಿಣ್ಣರ ವನ ದರ್ಶನ ಕಾರ್ಯಕ್ರಮದಲ್ಲಿ ಸೆಕೆಂಡರಿ ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ, ಶಿಕ್ಷಕರಾದ ನಾಗರಾಜ ಜಿ ನಾಯಕ, ವಿಶ್ವನಾಥ ಬೇವಿನಕಟ್ಟಿ, ಇಂದಿರಾ ನಾಯಕ ಉಪಸ್ಥಿತರಿದ್ದು ಹೈಸ್ಕೂಲ್ ವಿದ್ಯಾರ್ಥಿಗಳಿದ್ದೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ಪ್ರಯೋಜನ ಪಡೆದುಕೊಂಡರು.
ವರದಿ: ಎನ್.ರಾಮು.ಹಿರೇಗುತ್ತಿ

RELATED ARTICLES  ಕುಮಟಾ ತಹಶೀಲ್ದಾರ ಕಚೇರಿ ಮೇಲೆ ಎಸಿಬಿ ದಾಳಿ: ಹೊರ ಬಿತ್ತು ಲಂಚಾವತಾರ..!!