ಕುಮಟಾ: “ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗುವುದರಿಂದ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಕ್ರೀಡೆ ಸಹಕಾರಿಯಾಗಿದೆ” ಎಂದು ಪ್ರೇಮಾನಂದ ಗಾಂವಕರ ಪ್ರಿನ್ಸಿಪಾಲ್ ಹಿರೇಗುತ್ತಿ ಕಾಲೇಜ್ ನುಡಿದರು.
ಅವರು ಸೆಕೆಂಡರಿ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆದ ಹಳ್ಳೇರ ಸಮಾಜದ ವಿಠೋಬದೇವ ಯುವಕ ಸಂಘದಿಂದ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. “ಸದೃಢ ದೇಹದಲ್ಲಿ ಸದೃಢ ಮನಸ್ಸನ್ನೂ ಹುಟ್ಟು ಹಾಕುವುದೇ ಶಿಕ್ಷಣ, ಅತೀ ಅಚ್ಚುಕಟ್ಟಾಗಿ ಕ್ರಿಕೆಟ್ ಪಂದ್ಯಾವಳಿ ಸಂಘಟಿಸಿದ್ದಾರೆ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಲಿ” ಎಂದು ಶುಭಕೋರಿದರು.
ಹಿರೇಗುತ್ತಿ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನೀಲಕಂಠ ಎನ್ ನಾಯಕ ಕ್ರಿಕೆಟ್ ಪಂದ್ಯಾವಳಿ ಕ್ರೀಡಾಂಗಣ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಮು ಕೆಂಚನ್ ಉಪಾಧ್ಯಕ್ಷರು ಮಹಾಬಲೇಶ್ವರ ಅರ್ಬನ್‍ಬ್ಯಾಂಕ್ ಗೋಕರ್ಣ ಮಾತನಾಡಿ “ದೈಹಿಕ ಚಟುವಟಿಕೆಗಳಿಂದಾಗಿ ದೈಹಿಕ ಸಧÀೃಡತೆ ದೊರಕುವುದಲ್ಲದೆ ಬುದ್ಧಿಯೂ ವಿಕಾಸಗೊಳ್ಳುವುದು. ಅದಕ್ಕಾಗಿ ಕ್ರೀಡಾಕೂಟ ನಡೆಸಲು ಯೋಜಕರು ಅತೀ ಮುಖ್ಯ ಯೋಜಕರಿಂದ ಕ್ರೀಡಾಕೂಟ ಯಶಸ್ವಿಯಾಗುತ್ತದೆ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವಕೀಲ ರೋಹಿದಾಸ ಗಾಂವಕರ ಮುಖ್ಯಾಧ್ಯಾಪಕರು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಮಾತನಾಡಿ “ಜೀವನದುದ್ದಕ್ಕೂ ಆರೋಗ್ಯಕರ ದೈಹಿಕ ಚಟುವಟಿಕೆಗಳನ್ನು ಅನುಭವಿಸಲು ಅಗತ್ಯ ಜ್ಞಾನ, ಕೌಶಲ್ಯ ಹಾಗೂ ದಿಟ್ಟತನವುಳ್ಳ ದೈಹಿಕವಾಗಿ ಸುರಕ್ಷಿತ ವ್ಯಕ್ತಿಗಳನ್ನು ರೂಪಿಸಲು ನಡೆಯುವ ಕ್ರೀಡಾಕೂಟಗಳು ಸಹಾಯಕವಾಗಿದೆ” ಎಂದರು.
ಎನ್ ರಾಮು ಹಿರೇಗುತ್ತಿ ಮಾತನಾಡಿ “ವಿಠೋಬದೇವ ಯುವಕ ಸಂಘ ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮಗಳ ಮುಖಾಂತರ ಹಳ್ಳೇರ ಸಮಾಜವನ್ನು ಸದಾ ಸಕ್ರೀಯವಾಗಿರಿಸುವಲ್ಲಿ ಕಾರ್ಯತತ್ಪರವಾಗಿದೆ. ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಲಿ” ಎಂದು ಶುಭ ಕೋರಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮಹೇಶ ಕಮಲಾಕರ ನಾಯಕ ಸದಸ್ಯರು ಅರ್ಬನ್ ಬ್ಯಾಂಕ್ ಗೋಕರ್ಣ , ಶಿಕ್ಷಕರಾದ ಬಾಲಚಂದ್ರ ಹೆಗಡೇಕರ್, ವಿಶ್ವನಾಥ ಬೇವಿನಕಟ್ಟಿ, ನಾಗರಾಜ ನಾಯಕ, ಊರಿನ ಹಳ್ಳೇರ ಸಮಾಜದ ಯಜಮಾನ ನಾರಾಯಣ ಹಳ್ಳೇರ, ಶಿವಾನಂದ ಹಳ್ಳೇರ, ಗ್ರಾ.ಪಂ. ಹಿರೇಗುತ್ತಿ ಸದಸ್ಯೆ ಭವಾನಿ ಗಣಪತಿ ಹಳ್ಳೇರ ಉಪಸ್ಥಿತರಿದ್ದರು.
ಶ್ವೇತಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಗಣೇಶ ಹಳ್ಳೇರ ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಬಹುಮಾನವನ್ನು ನೀಡಿದ ಹಾಗೂ ಧನಸಹಾಯ ಮಾಡಿದ ಊರಿನ ಎಲ್ಲಾ ದಾನಿಗಳಿಗೂ ಧನ್ಯವಾದ ಅರ್ಪಿಸಿ ವಂದಿಸಿದರು.
ವಿಠೋಬ ದೇವ ಯುವಕ ಸಂಘದ ಅಧ್ಯಕ್ಷ ಮಹೇಶ ಶಾಂತಾ ಹಳ್ಳೇರ, ಉಪಾಧ್ಯಕ್ಷ ಪಾಂಡುರಂಗ ಹಳ್ಳೇರ, ಅಭಿಷೇಕ ಹಳ್ಳೇರ ಹಾಗೂ ಯುವಕ ಸಂಘದ ಸರ್ವ ಸದಸ್ಯರು ಹಾಗೂ ಊರ ನಾಗರಿಕರು ಸಹಕರಿಸಿದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಹಾಗೂ ಕಫ್‍ನ್ನು ವಿರಾಂಜನೇಯ ಬಳಲೆ ಟೀಮ್ ಮತ್ತು ರನ್ನರ್ಸ್ ಅಫ್ ಟ್ರೋಫಿಯನ್ನು ಭಜರಂಗಿ ಬಾಯ್ಸ್ ಹಿರೇಗುತ್ತಿ ಗೆದ್ದುಕೊಂಡವು.
ವರದಿ: ಎನ್ ರಾಮು ಹಿರೇಗುತ್ತಿ