ಭಟ್ಕಳ -” ಭಾರತವು ಯುವ ಪ್ರತಿಭೆಗಳು ಅಧಿಕ ಪ್ರಮಾಣದಲ್ಲಿ ಇರುವ ರಾಷ್ಟ್ರವಾಗಿದ್ದು, ಇಲ್ಲಿನ ಯುವ ಸಮುದಾಯದ ಕೌಶಲ್ಯ ಅಭಿವೃದ್ಧಿಯಲ್ಲಿ ರೋಟರಿ ಸಂಸ್ಥೆಯು ಬಹುಮಖ್ಯ ಪಾತ್ರ ನಿರ್ವಹಿಸುತ್ತಿದೆ” ಎಂದು ರೊಟಾರಿಯನ್ ಡಾ.ಗೌರೀಶ್ ಪಡುಕೋಣೆ ಹೇಳಿದರು.
ನಗರದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ, ಭಟ್ಕಳ್ ಎಜುಕೇಷನ್ ಟ್ರಸ್ಟ್ ಮತ್ತು ರೋಟರೀ ಕ್ಲಬ್ ಇದರ ಸಂಯೋಜನೆಯ ರೋಟ್ರಾಕ್ಟ್ ಕ್ಲಬ್ ಘಟಕದ ಸ್ಥಾಪನಾ ಕಾರ್ಯವನ್ನು ನೆರವೇರಿಸಿ ಮಾತನಾಡಿದ ಅವರು, “ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಯಾಗುವುದಿಲ್ಲ, ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಾಗ ಮಾತ್ರವೇ ಅವರಲ್ಲಿ ಕೌಶಲ್ಯಾಭಿವೃದ್ದಿಯ ಜೊತೆಗೆ ದೇಶದ ಬಗ್ಗೆ ಕಾಳಜಿ ಮೂಡುತ್ತದೆ.” ಎಂದರು.
ಭಟ್ಕಳ ರೋಟರೀ ಕ್ಲಬ್‍ನ ಅಧ್ಯಕ್ಷ ಈಶ್ವರ್ ನಾಯ್ಕ್ ಸ್ವಾಗತಿಸಿದರು, ಕಾರ್ಯದರ್ಶಿ ಶ್ರೀನಿವಾಸ್ ಪಡಿಯಾರ್, ಪ್ರಾಂಶುಪಾಲ ಶ್ರೀನಾಥ್ ಪೈ, ಘಟಕದ ಸಂಯೋಜಕ ದೇವೇಂದ್ರ ಕಿಣಿ, ನೂತನ ಅಧ್ಯಕ್ಷೆ ಮಹಾಲಕ್ಷ್ಮಿ ಶಾನುಭಾಗ್ ಮತ್ತು ಸದಸ್ಯರು ಉಪಸ್ಥಿತರಿದ್ದರು. ಮನೀಷ ಮೇಸ್ತ ನಿರೂಪಿಸಿದರು, ಕಾರ್ಯದರ್ಶಿ ವೈಭವ್ ನಾಯ್ಕ್ ವಂದಿಸಿದರು.