ಕುಮಟಾ: ತಾಲೂಕಿನ ಗಂಗಾವಳಿಯಲ್ಲಿ ಮೀನುಗಾರಿಕೆಗೆ ತೆರಳುವ ವೇಳೆ ಬೋಟ್ ನ ಯಂತ್ರಕ್ಕೆ ಕಾಲು ಸಿಲುಕಿ ಮೀನುಗಾರನ ಕಾಲು ಮುರಿದ ಘಟನೆ ವರದಿಯಾಗಿದೆ.
ಸಮುದ್ರದ ದಡದಿಂದ ಮೀನುಗಾರಿಕೆಗೆಂದು ತೆರಳಿದ್ದ ವೇಳೆ ಸ್ಥಳೀಯರಾದ ವಿನಾಯಕ ಅಂಬಿಗ ಎನ್ನುವವರಿಗೆ ಕಾಲಿಗೆ ಸ್ಪೀಡ್ ಬೋಟನ ಯಂತ್ರ ತಗುಲಿದ್ದು, ಕಾಲಿನ ಮೂಳೆ ಮುರಿದಿದೆ.
ತಕ್ಷಣ ಬೋಟನ ದಡಕ್ಕೆ ತಂದು ಗೋಕರ್ಣ 108 ವಾಹನದ ಮೂಲಕ ಗೋಕರ್ಣ ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ತಂದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾ ತಾಲೂಕು ಆಸ್ಪತ್ರೆಗೆ ಕರೆತರಲಾಗಿದೆ. ಹೆಚ್ಚಿನ ಚಿಕಿತ್ಸೆಯ ನಿಮಿತ್ತ ಮಣಿಪಾಲಕ್ಕೆ ರವಾನಿಸಲಾಗಿದೆ.