ಕುಮಟಾ: ಇನ್‍ಸ್ಪೈಯರ್ ಅವಾರ್ಡ್ ರಾಜ್ಯಮಟ್ಟಕ್ಕೆ ಆಯ್ಕೆಯಾದ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ಸಾತ್ವಿಕ ನಾಗೇಶ ಭಟ್ಟ ಟ್ಯಾಂಕ್‍ಗೆ ನೀರು ತುಂಬುಕ್ಕಿ ಅಪವ್ಯಯವಾಗುವುದನ್ನು ತಡೆಗಟ್ಟಲು ನೆರವಾಗುವಂತೆ ಸ್ವಯಂಚಾಲಿತವಾಗಿ ವಿದ್ಯುತ್ ಆಫ್ ಮಾಡಲು ಹಾಗೂ ನೀರು ಖಾಲಿಯಾದಾಗ ವಿದ್ಯುತ್ ಆನ್ ಆಗಿ ನೀರು ತುಂಬುವ ವಿಶಿಷ್ಟ ರೀತಿಯ ನಾವಿನ್ಯತೆಯ ವೈಜ್ಞಾನಿಕ ಉಪಕರಣವನ್ನು ತಯಾರಿಸಿ ಪ್ರದರ್ಶಿಸಿರುತ್ತಾನೆ.
ಮಂಡ್ಯ ಡಯಟ್ ನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಈತನಿಗೆ ತಂದೆ ನಾಗೇಶ್ ಭಟ್ಟ, ಶಾಲೆಯ ವಿಜ್ಞಾನ ಶಿಕ್ಷಕರಾದ ಕಿರಣ ಪ್ರಭು, ಅನಿಲ್ ರೊಡ್ರಗೀಸ್ ಹಾಗೂ ಮುಖ್ಯಾಧ್ಯಾಪಕ ಎನ್.ಆರ್.ಗಜು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.