ಕುಮಟಾ : ಹೊನ್ನಾವರದ ಪರೇಶ್ ಮೇಸ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಭವಿಸಿದ ಕುಮಟಾ-ಹೊನ್ನಾವರ ಗಲಭೆಯಲ್ಲಿ ಭಾಗಿಯಾಗಿದ್ದಾರೆನ್ನಲಾದ ಸುಮಾರು 300 ಕ್ಕೂ ಹೆಚ್ಚು ಆರೋಪಿಗಳು 03 – 02 -2020 ರಂದು ಬೆಂಗಳೂರಿನ ನ್ಯಾಯಾಲಕ್ಕೆ ಹಾಜರಾಗಲಿದ್ದಾರೆ .

ಪರೇಶ ಮೇಸ್ತಾ ಪ್ರಕರಣ ಕುಮಟಾದಿಂದ ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು . ಈ ಕುರಿತು ಆರೋಪಿಗಳಿಗೆ ಬೆಂಗಳೂರಿನ ನ್ಯಾಯಾಲಯಕ್ಕೆ ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು . ಆದರೆ ನಿಗದಿತ ಸಮಯದಲ್ಲಿ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಕೆಲ ದಿನಗಳ ಹಿಂದೆ ವಾರಂಟ್ ಹೊರಡಿಸಿತ್ತು .

RELATED ARTICLES  ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರದಿಂದ ಬೇಸಿಗೆ ಶಿಬಿರ: ಯಕ್ಷಗಾನ ಕಲಿಯಲು ಸುವರ್ಣ ಅವಕಾಶ

ಇದರಿಂದಾಗಿ ದಿನಾಂಕ 03 – 02 -2020 ರಂದು ಬೆಂಗಳೂರಿನ ನ್ಯಾಯಾಲಯಕ್ಕೆ ಎಲ್ಲಾ ಆರೋಪಿಗಳು ಹಾಜರಾಗಿ ಜಾಮೀನು ಪಡೆಯಬೇಕಾಗದೆ.

ಹೀಗಾಗಿ ಇಂದು ಭಾನುವಾರ ಎಲ್ಲಾ ಆರೋಪಿಗಳು ಬೆಂಗಳೂರಿಗೆ ಪ್ರಯಾಣ ಬೆಳಸಿದ್ದಾರೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಶಾಸಕ ದಿನಕರ ಶೆಟ್ಟಿಯವರು ವಹಿಸಿಕೊಂಡಿದ್ದು , ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ ಹಾಗೂ ನಾಳೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಅವರೇ ಮಾಡಿದ್ದು ಸ್ವತಃ ಶಾಸಕರೇ ಜೊತೆಗೆ ಪ್ರಯಾಣ ಬೆಳೆಸಿದ್ದಾರೆ.

RELATED ARTICLES  ಶನಿವಾರ ಯಕ್ಷಗಾನ ಪ್ರದರ್ಶನ.

    ಶಾಸಕರು ಮಾಡಿರುವ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯವನ್ನು ಶಾಸಕರು ಹಾಗೂ ಅವರ ಬೆಂಬಲಿಗರು ಹಂಚಿಕೊಂಡಿದ್ದಾರೆ.