ಕುಮಟಾ : ಕಲಾಗಂಗೋತ್ರಿ- ಕುಮಟಾ ಆಶ್ರಯದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ, ಸಾಮಾಜಿಕ ಕಾರ್ಯಕರ್ತ ಹಾಗೂ ಕಲಾಗಂಗೋತ್ರಿಯ ಸಂಸ್ಥಾಪಕ ದುರ್ಗಾದಾಸ ಗಂಗೊಳ್ಳಿ ಯವರ ಸ್ಮರಣಾರ್ಥ ಹಿರಿಯ ಸಾಧಕರಿಗೆ ನೀಡಲಾಗುತ್ತಿರುವ ದಿ, ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ಹಡಿನಬಾಳ ಶ್ರೀಪಾದ ಹೆಗಡೆಯವರನ್ನು ಆಯ್ಕೆ ಮಾಡಲಾಗಿದೆ.
ಫೆಬ್ರವರಿ 7 ಶುಕ್ರವಾರ ರಾತ್ರಿ 8-30 ಗಂಟೆಗೆ ಕುಮಟಾದ ಮಣಕಿ ಮೈದಾನದಲ್ಲಿ ಪೆರ್ಡೂರು ಮೇಳದಿಂದ ಏರ್ಪಡಿಸಲಾದ “ಮಾನಸಗಂಗಾ” ಯಕ್ಷಗಾನ
ವೇದಿಕೆಯಲ್ಲಿ ಹದಿನೈದು ಸಾವಿರ ರೂಪಾಯಿ ನಗದು ಸಹಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದೆಂದು ಕಲಾಗಂಗೋತ್ರಿಯ ಅಧ್ಯಕ್ಷರಾದ ಶ್ರೀಧರ ನಾಯ್ಕ, ಉಪಾಧ್ಯಕ್ಷ ಗಣೇಶ ಭಟ್ಟ, ಕಾರ್ಯದರ್ಶಿ ಅರ್, ಡಿ, ಪೈ ತಿಳಿಸಿದ್ದಾರೆ.