ಕುಮಟಾ: ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ಶಿರಸಿಯ ಅವೆಮರಿಯಾ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ವಿಶೇಷತೆ ಮೆರೆದಿದ್ದಾರೆ.
ಅದ್ವೈತ್ ರವಿರಾಜ ಕಡ್ಲೆ ಡಾ.ಎನ್.ಆರ್.ನಾಯಕ ಅವರ ‘ಚಿಕ್ಕಳ್ ಬುಡ್ಡಿ’ ಮಕ್ಕಳ ಕವನ ಸಂಕಲನದ ಕುರಿತು ನನ್ನ ಓದು ನನ್ನ ಅನುಭವ ಗೋಷ್ಠಿಯಲ್ಲಿ ಭಾಗವಹಿಸಿದ್ದರೆ, ನಿವೇದಿತಾ ಬೀರಾ ಪಟಗಾರ ಕಥಾಗೋಷ್ಠಿಯಲ್ಲಿ ಸ್ವರಚಿತ ಕಥಾವಾಚನ ಮಾಡಿದ್ದಾರೆ. ಸಂಭಾಷಣಾ ಗೋಷ್ಠಿಯಲ್ಲಿ ಸಾತ್ವಿಕ ನಾಗೇಶ ಭಟ್ಟ ಭಾಷಾ ಕೌಶಲ್ಯ ಚತುರತೆ ಪ್ರದರ್ಶಿಸಿದರೆ ಕವಿಗೋಷ್ಠಿಯಲ್ಲಿ ಮುಕ್ತಾ ರಾಮದಾಸ ಭಟ್ಟ ಸ್ವರಚಿತ ಕವನ ವಾಚಿಸಿ ಎಲ್ಲರ ಗಮನ ಸೆಳೆದಿರುತ್ತಾರೆ.
ಇವರ ಚೇತೋಹಾರಿ ಪಾಲ್ಗೊಳ್ಳುವಿಕೆಗೆ ಪಾಲಕವರ್ಗ, ಮುಖ್ಯಾಧ್ಯಾಪಕ ಎನ್.ಆರ್.ಗಜು ಹಾಗೂ ಶಿಕ್ಷಕವರ್ಗದವರು ಪ್ರೋತ್ಸಾಹಿಸಿ ಅಭಿನಂದಿಸಿದ್ದಾರೆ.