ಕುಮಟಾ : ಕಳೆದ ಕೆಲ ದಿನದ ಹಿಂದೆ ಕಾಂಗ್ರೇಸ್ ಪಕ್ಷ ತೊರೆದಿದ್ದ ಉದ್ಯಮಿ ಯಶೋಧರ ನಾಯ್ಕ್ ಅವರು ಇಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನೇತ್ರತ್ವದಲ್ಲಿ ಅಪಾರ ಅಭಿಮಾನಿಗಳ ಜೊತೆ ಕುಮಟಾದ ಮಣಕಿ ಮೈದಾನದಲ್ಲಿ ಬಿ.ಜೆ.ಪಿಗೆ ಸೇರ್ಪಡೆ ಯಾದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಕಾರಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಬಿ.ಜೆ.ಪಿಯ ಬಾವುಟ ನೀಡಿ ಯಶೋಧರ್ ನಾಯ್ಕ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

RELATED ARTICLES  ಕುಮಟಾ ಉದಯ ಬಜಾರ್ ನಲ್ಲಿ ಜನವರಿ 23 ರಿಂದ ಪ್ರಾರಂಭವಾಗಲಿದೆ "ಉದಯ ಉತ್ಸವ":ಗ್ರಾಹಕರಿಗೆ ಆಫರ್ ಗಳ ಸುರಿಮಳೆ

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ , ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ , ಲೋಕಸಭಾ ಸದಸ್ಯ ಅನಂತ ಕುಮಾರ್ ಹೆಗಡೆ, ಮಾಜಿ ಶಾಸಕರಾದ ಕುಮಾರ್ ಬಂಗಾರಪ್ಪ , ಜೆ.ಡಿ ನಾಯ್ಕ್ , ಶಿವಾನಂದ ನಾಯ್ಕ್ , ದಿನಕರ ಶೆಟ್ಟಿ , ವಿ.ಎಸ್. ಪಾಟೀಲ್, ಬಿ.ಜೆ.ಪಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ್ , ಮುಖಂಡರಾದ ರೂಪಾಲಿ ನಾಯ್ಕ್, ನಾಗರಾಜ ನಾಯಕ , ಸೂರಜ್ ನಾಯ್ಕ್, ಎಮ್.ಪಿ ಕರ್ಕಿ , ರಾಮು ರಾಯ್ಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

RELATED ARTICLES  ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಗೆದ್ದ ಸಿವಿಎಸ್‌ಕೆ ವಿದ್ಯಾರ್ಥಿಗಳು