ಕುಮಟಾ: ತಾಲೂಕಿನ ಹೊಲನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ರವೀಂದ್ರ ಭಟ್ಟ ಸೂರಿ ಗೌರವ ಡಾಕ್ಟರೇಟ್ ಪಡೆದಿದ್ದು , ಈ ಗೌರವ ಪಡೆದ ಜಿಲ್ಲೆಯ ಪ್ರಥಮ ಶಿಕ್ಷಕ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಇಂಟರ್ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಯವರು ನೀಡಿದ ಈ ಪ್ರತಿಷ್ಠಿತ ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು “ಇದು ನನ್ನೆಲ್ಲ ವೃತ್ತಿಬಾಂಧವರಿಗೆ ದೊರೆತ ಗೌರವ . ಒಬ್ಬ ಶಿಕ್ಷಕನ ಪ್ರಾಮಾಣಿಕ ದುಡಿಮೆಯನ್ನು ಗುರುತಿಸಿದ್ದು ಖುಷಿಕೊಟ್ಟಿದೆ. ಇಂತಹ ಪ್ರೋತ್ಸಾಹ ನಮ್ಮಂತವರ ಉತ್ಸಾಹವನ್ನು ಹೆಚ್ಚಿಸುತ್ತದೆ ” ಎಂದರು.

RELATED ARTICLES  ಅಡಿಕೆಕೊನೆ ಕೊಯ್ಯಲು ಮರ ಹತ್ತಿದವ ಆಯತಪ್ಪಿ ಬಿದ್ದು ಸಾವು.


ಶಿಕ್ಷಕ ರವೀಂದ್ರ ಭಟ್ಟ ಸೂರಿಯವರು ಸೃಜನಶೀಲ ಶಿಕ್ಷಕರಾಗಿದ್ದು ಶೈಕ್ಷಣಿಕ ಸಾಹಿತ್ಯ, ಯೋಗದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು, 2000 ಕ್ಕೂ ಅಧಿಕ ಕಾರ್ಯಕ್ರಮ ನಿರೂಪಣೆ, ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ, ಸಂಪನ್ಮೂಲ ವ್ಯಕ್ತಿಯಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ, ಸರ್ಕಾರಿ ಶಾಲೆಯಲ್ಲಿ ಮಾಡಿದ ವಿಶೇಷ ಸಾಧನೆ,ಸಂಘಟನಾ ಚತುರತೆ ಮುಂತಾದವುಗಳನ್ನು ಗಮನಿಸಿ ಗೌರವ ಡಾಕ್ಟರೇಟ್‌ ನೀಡಲಾಗುತ್ತಿದೆ ಎಂದು ವಿಶ್ವವಿದ್ಯಾಲಯ ಘೋಷಿಸಿದ್ದು ನಿಜಕ್ಕೂ ಶಿಕ್ಷಕ ವೃಂದ ಹೆಮ್ಮೆ ಪಡುವ ಸಂಗತಿ.

RELATED ARTICLES  ಬಂಗಾರಮಕ್ಕಿಯಲ್ಲಿ ಸಂಪನ್ನಗೊಂಡಿತು ಎರಡು ದಿನಗಳ ರಾಜ್ಯಮಟ್ಟದ ಕೌಶಲ್ಯಾಭಿವೃದ್ಧಿ ಕಾರ್ಯಗಾರ!

ತಮ್ಮ ಶಾಲೆಯನ್ನು ಉತ್ತರ ಕನ್ನಡ ಜಿಲ್ಲೆಯ “Best Practicing school” ಆಗಿ ರೂಪುಗೊಳಿಸಿದ ಹಿರಿಮೆ ಇವರದ್ದು . ಕ್ರಿಯಾಶೀಲ ಶಿಕ್ಷಕ, ಲೇಖಕ, ಸಂಘಟಕ, ನಿರೂಪಕ ರವೀಂದ್ರ ಭಟ್ಟ ಸೂರಿಯವರಿಗೆ ಈ ಗೌರವ ದೊರಕಿದ್ದು ಶಿಕ್ಷಕ ವೃಂದದ ವ್ಯಾಪಕ ಸಂತಸಕ್ಕೆ ಕಾರಣವಾಗಿದೆ.