ದಿ: 19-02-2020 ಬುಧವಾರದಂದು ಸಂಜೆ 6.30ಕ್ಕೆ ಗುಣವಂತೆಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ (ರಿ)ಯ ಈ ವರ್ಷದ ನೂತನ ಪ್ರಸಂಗ ಹಟ್ಟಿಯಂಗಡಿ ರಾಮಭಟ್ಟ ವಿರಚಿತ ‘ಹಿಡಿಂಬಾ ವಿವಾಹ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಅನಂತ ಹೆಗಡೆ ದಂತಳಿಗೆ, ಚಂಡೆಗೆ ಶ್ರೀ ಕೃಷ್ಣ ಯಾಜಿ ಇಡಗುಂಜಿ, ಮದ್ದಲೆಗೆ ಶ್ರೀ ನರಸಿಂಹ ಹೆಗಡೆ ಮೂರೂರು, ಮುಮ್ಮೇಳದ ಕಲಾವಿದರಾಗಿ ಶ್ರೀ ಕೆರೆಮನೆ ಶಿವಾನಂದ ಹೆಗಡೆ, ಶ್ರೀ ಈಶ್ವರ ಭಟ್ಟ ಹಂಸಳ್ಳಿ, ಶ್ರೀ ಸದಾಶಿವ ಭಟ್ಟ ಯಲ್ಲಾಪುರ, ಶ್ರೀ ವಿಘ್ನೇಶ್ವರ ಹಾವಗೋಡಿ, ಶ್ರೀ ಸೀತಾರಾಮ ಹೆಗಡೆ ಮುಡಾರೆ, ಶ್ರೀ ಚಂದ್ರಶೇಖರ ಎನ್., ಶ್ರೀ ಕೆರೆಮನೆ ಶ್ರೀಧರ ಹೆಗಡೆ, ಶ್ರೀ ಮಹಾವೀರ ಜೈನ್, ಶ್ರೀ ನಕುಲ ಗೌಡ, ಶ್ರೀ ಗಣಪತಿ ಕುಣಬಿ, ಶ್ರೀ ಕೃಷ್ಣ ಮರಾಠಿ, ಶ್ರೀ ಧನಂಜಯ ಗೌಡ ಇರಲಿದ್ದಾರೆ.