ಹೊನ್ನಾವರ: ಭವಿಷ್ಯದ ಸುಂದರ ಬದುಕಿಗೆ ಪ್ರೌಡಶಾಲೆ ಎನ್ನುವುದು ಒಂದು ಅಡಿಪಾಯ ಇದ್ದಂತೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಮನಸ್ಸನ್ನು ಗಟ್ಟಿಯಾಗಿ ಹಿಡಿದುಕೊಂಡು ಸುಂದರ ಬದುಕಿಗೆ ಸೂಕ್ತ ಅಡಿಪಾಯ ನಿರ್ಮಿಸಿಕೊಳ್ಳುವುದು ಅಗತ್ಯ ಎಂದು ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಲಕ್ಷ್ಮಣ ಜೆ. ಶಾನಭಾಗ್ ಸರಾಫ್ ಅಭಿಪ್ರಾಯಪಟ್ಟರು.

RELATED ARTICLES  ಯಲಕೊಟ್ಟಿಗೆ ಶಾಲೆಯಲ್ಲಿ ಕೊಡುಗೆ ಸ್ವೀಕಾರ ಕಾರ್ಯಕ್ರಮ

ಅವರು ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಕನ್ನಡ ಮಾಧ್ಯಮದ ವಾರ್ಷಿಕ ಸ್ನೇಹಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಮಕ್ಕಳಲ್ಲಿ ಹುದುಗಿರುವ ಸೃಜನಶೀಲತೆಯನ್ನು ಬೆಳೆಸಲು ಶಾಲಾ ಹಸ್ತಪತ್ರಿಕೆ ‘ಮರಿದುಂಬಿ’ ಪ್ರಕಟಗೊಳ್ಳುತ್ತಿದ್ದು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಪಠ್ಯ-ಪಠ್ಯೇತರ ಹಾಗೂ ಪಠ್ಯ ಪೂರಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡರು.

RELATED ARTICLES  ಮುಂಗಾರು ತಂದ ಅವಾಂತರ: ಹೊನ್ನಾವರದ ಹಲವೆಡೆ ಮನೆ ಕೊಟ್ಟಿಗೆಗಳಿಗೆ ಹಾನಿ.

ಆಡಳಿತ ಮಂಡಳಿ ಅಧ್ಯಕ್ಷ ಜೆ.ಟಿ. ಪೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧ್ಯಾಪಕ ವಿ.ಎಸ್.ಅವಧಾನಿ ಸ್ವಾಗತಿಸಿ 2019-20 ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು‌.